ಅಜಯ್ ಸಿಂಗ್ ಮಂತ್ರಿಯಾಗಬೇಕೆಂದಾಗ, ಸ್ವಲ್ಪ ದಿನ ಕಾಯಪ್ಪ ಎಂದಿದ್ದೆ: ಮಾಜಿ ಸಿಎಂ ಸಿದ್ದರಾಮಯ್ಯ

ಅಜಯ್ ಸಿಂಗ್ ಮಂತ್ರಿಯಾಗಬೇಕೆಂದಾಗ, ಸ್ವಲ್ಪ ದಿನ ಕಾಯಪ್ಪ ಎಂದಿದ್ದೆ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅಜಯ್‍ ಸಿಂಗ್ ಮಂತ್ರಿ ಆಗಬೇಕು ಎಂದಾಗ, ಸ್ವಲ್ಪ ದಿನ ಕಾಯಪ್ಪ ಎಂದಿದ್ದೆ. ಅಲ್ಲದೆ ದೆಹಲಿ ವಿಶೇಷ ಪ್ರತಿನಿಧಿಯಾಗಲು ಸಲಹೆಯನ್ನೂ ನೀಡಿದ್ದೆ. ಅದನ್ನು ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದೆಹಲಿ ವಿಶೇಷ ಪ್ರತಿನಿಧಿಯಾಗಿ ನೇಮಕವಾದ ಜೇವರ್ಗಿ ಶಾಸಕ ಅಜಯ್‍ಸಿಂಗ್ ಅವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಅಜಯ್‍ಸಿಂಗ್‍ಗೆ ಹಿಂದಿ ಭಾಷೆ ಚೆನ್ನಾಗಿ ಬರುವುದರಿಂದ ಹೆಚ್ಚು ಅನುಕೂಲವಾಗಲಿದೆ. ಜೆಡಿಎಸ್ ನಿಂದಲೂ ಒಬ್ಬರು ವಿಶೇಷ ಪ್ರತಿನಿಧಿಯಾಗಿದ್ದಾರೆ. ನಾನಿದ್ದಾಗಲೂ ಸಲೀಂ ಅಹಮದ್ ಮತ್ತು ನಾಡಗೌಡ ಅವರನ್ನು ದೆಹಲಿ ಪ್ರತಿನಿಧಿಗಳನ್ನಾಗಿ ನೇಮಿಸಲಾಗಿತ್ತು ಎಂದು ಹೇಳಿದರು.

ಕೇಂದ್ರದ ಸಚಿವರ ಜೊತೆ ಹೆಚ್ಚು ಸಂಪರ್ಕ ಇಟ್ಟುಕೊಂಡರೆ ಹೆಚ್ಚು ಅನುದಾನ ತರಲು ಸಾಧ್ಯವಾಗುತ್ತದೆ. ಅಜಯ್‍ಸಿಂಗ್‍ಗೆ ಸಹಾಯ ಮಾಡಲು ಸ್ಥಾನಿಕ ಸಹಾಯಕರನ್ನು ನೇಮಿಸಲಾಗಿದೆ.

ಅನುದಾನ ಬಿಡುಗಡೆ ವಿಷಯದಲ್ಲಿ ಮೇಲಿಂದ ಮೇಲೆ ಒತ್ತಡ ಹಾಕಿದರೆ ರಾಜ್ಯಕ್ಕೆ ಅನುಕೂಲವಾಗಲಿದೆ ಎಂದರು.

ದೆಹಲಿಯಲ್ಲಿರುವ ಕೇಂದ್ರ ಸಚಿವರ ಪರಿಚಯವಾಗುವುದರಿಂದ ರಾಷ್ಟ್ರ ರಾಜಕಾರಣಕ್ಕೂ ಮೈಲಿಗಲ್ಲಾಗಲಿದೆ. ಹಾಗಂತ ಅಜಯ್‍ಸಿಂಗ್ ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕು ಎಂದು ನಾನು ಹೇಳುವುದಿಲ್ಲ. ಮೊದಲಿಗೆ ರಾಜಕಾರಣದಲ್ಲಿ ತಾಳ್ಮೆ, ಸಹನ್ಮುಖಿಯಾಗಿರುವುದು ಮುಖ್ಯ ಎಂದು ಸಲಹೆ ಮಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos