ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್

ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್

ಬೆಂಗಳೂರು : ಆಪರೇಷನ್ ಕಮಲ ಆಡಿಯೋ ವಿವಾದದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಟ್ವೀಟರ್ ನಲ್ಲಿ ಸಿದ್ದರಾಮಯ್ಯ ಅವರು, `ಆಪರೇಷನ್ ಕಮಲ’ ಆಡಿಯೋ ಸಂಭಾಷಣೆ ಆಘಾತಕಾರಿಯಾಗಿದೆ. ಇಡೀ ದೇಶದ ಮುಂದೆ ಬಿಜೆಪಿಯ ಬಣ್ಣ ಬಯಲಾಗಿದೆ. ಸ್ವಚ್ಚ ಬಿಜೆಪಿಯ ಸಜ್ಜನರು, ಸಂಘ ಪರಿವಾರದ ಸಂಸ್ಕೃತಿ ರಕ್ಷಕರು ಯಾವ ಬಿಲದಲ್ಲಿ ಅಡಗಿದ್ದಾರೆ. ಮಾತಾಡು ಬಿಜೆಪಿ ಮಾತಾಡು ಎಂಬ ಹ್ಯಾಶ್ ಟ್ಯಾಗ್ ಗಳನ್ನು ಬಳಸಿಕೊಂಡು ಟ್ವೀಟ್ ಮಾಡಿದ್ದಾರೆ.

ವಿರೋಧಿಗಳ ಸಾವು ಬಯಸುವಷ್ಟು ರಾಜಕಾರಣಿಗಳು ಅಧೋಗತಿಗೆ ಇಳಿಯಬಾರದು. ಈ ದುರ್ಬುದ್ಧಿ ಬಿಜೆಪಿ ರಕ್ತದಲ್ಲಿದೆ. ಹಿಂದೆ ಜನಾರ್ದನ ರೆಡ್ಡಿ ನನ್ನ ಕುಟುಂಬದ ಬಗ್ಗೆ ಹೇಳಿದ ಮಾತನ್ನೇ ರಾಜ್ಯ ಬಿಜೆಪಿ ನಾಯಕರು ದೇವೇಗೌಡರ ಕುಟುಂಬದ ಬಗ್ಗೆ ಹೇಳಿದ್ದಾರೆ.

ಇನ್ನು ಬಿಜೆಪಿ ಜೊತೆಗೆ ಸಂಘ ಪರಿವಾರದ ವಿರುದ್ಧವೂ ಟೀಕೆ ಮಾಡಿರುವ ಸಿದ್ದರಾಮಯ್ಯ, ಮಹಾತ್ಮ ಗಾಂಧಿ ಸಾವನ್ನು ಸಂಭ್ರಮಿಸಿದ್ದ ಬಿಜೆಪಿ, ಈಗ ವಿಪಕ್ಷ ನಾಯಕರ ಸಾವಿನ ಬಗ್ಗೆ ಸಂಭ್ರಮ ಪಡುತ್ತಿದೆ ಎಂದು ಸರಣಿ ಟ್ವೀಟ್ ಗಳನ್ನು ಮಾಡಿ ಬಿಜೆಪಿ ಸಂಘ ಪರಿವಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos