ಕಾಂಗ್ರೆಸ್ ಸೋಲಿಸುವುದೇ ಬಿಜೆಪಿ-ಜೆಡಿಎಸ್ ಸಿದ್ದಾಂತ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್ ಸೋಲಿಸುವುದೇ ಬಿಜೆಪಿ-ಜೆಡಿಎಸ್ ಸಿದ್ದಾಂತ: ಸಿಎಂ ಸಿದ್ದರಾಮಯ್ಯ

ಚಾಮರಾಜನಗರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾನತಾಡಿದರು.ಬಿಜೆಪಿ ಜೆಡಿಎಸ್ ನಾಯಕರಿಗೆ ಭಯಶುರುವಾಗಿದೆ. ಸೋಲಿನ ಭಯದಿಂದ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿ ಜೆಡಿಎಸ್ ಗೆ ಯಾವುದೇ ಸಿದ್ದಾಂತ ಇಲ್ಲ ಕಾಂಗ್ರೆಸ್ ಸೋಲಿಸುವುದು ಇವರ ಏಕೈಕ ಗುರಿಯಾಗಿದೆ ಎಂದು ಕಿಡಿಕಾರಿದರು.

ಗ್ಯಾರಂಟಿ ಯೋಜನೆ ನಿಲ್ಲಿಸ್ತಾರೆ ಅಂತಾ ಬಿಜೆಪಿಯವರು ಹೇಳುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ. ಸುಳ್ಳೇ ಬಿಜೆಪಿ ನಾಯಕರ ಮನೆ ದೇವರು.  ಬಿಜೆಪಿಯವರಿಗೆ ಸತ್ಯ ಅಂದರೆ ಗೊತ್ತಿಲ್ಲ. ನನ್ನನ್ನ ಕಂಡರೇ ಬಿಜೆಪಿಗೆ ಹೊಟ್ಟೆಯುರಿ ಎಂದು ಸಿಎಂ ಸಿದ್ದರಾಮಯ್ಯ ಹರಿಹಾಯ್ದರು.

ಫ್ರೆಶ್ ನ್ಯೂಸ್

Latest Posts

Featured Videos