ಶೃತಿ ಹಾಸನ್-ಮೈಕಲ್ ಎರಡು ವರ್ಷಗಳ ಪ್ರೀತಿ ಅಂತ್ಯ..!

ಶೃತಿ ಹಾಸನ್-ಮೈಕಲ್ ಎರಡು ವರ್ಷಗಳ ಪ್ರೀತಿ ಅಂತ್ಯ..!

ಮುಂಬೈ, ಏ. 26, ನ್ಯೂಸ್ ಎಕ್ಸ್ ಪ್ರೆಸ್: ಶೃತಿ ಹಾಸನ್ ಪ್ರೇಮ ನೌಕೆ ಮುಗುಚಿದೆ. ಎರಡು ವರ್ಷಗಳ ಪ್ರೀತಿ ಅಂತ್ಯವಾಗಿದೆ. ಪ್ರಿಯತಮ ಮೈಕಲ್, ಶೃತಿ ಜತೆ ಸಂಬಂಧ ಕಡಿದುಕೊಂಡಿದ್ದಾರೆ. ನಟಿ ಶೃತಿ ಹಾಸನ್​ ಅವರಿಗೆ ಪ್ರೇಮಭಂಗವಾಗಿದೆ. ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಮೈಕೆಲ್ ಕಾರ್ಸೇಲ್-ಶೃತಿ ಲವ್​ ಬ್ರೇಕಪ್​ ಆಗಿದೆ. ನಟ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್, ಲಂಡನ್ ಮೂಲದ ರಂಗಭೂಮಿ ಕಲಾವಿದ ಮೈಕೆಲ್ ಅವರನ್ನು ಪ್ರೀತಿಸುತ್ತಿದ್ದರು. ಈತನಿಗಾಗಿಯೇ ಮುಂಬೈನಲ್ಲಿ ಮನೆ ಮಾಡಿ ವಾಸವಾಗಿದ್ದರು. ಈಗ ಇದ್ದಕ್ಕಿದ್ದಂತೆ ಇವರ ಪ್ರೀತಿ ಒಡೆದು ಹೋಗಿದೆ. ಮೈಕಲ್​, ಇಂದು ತಮ್ಮ ಟ್ವಿಟ್ಟರ್​ ಹಾಗೂ ಇನ್​ಸ್ಟಾಗ್ರಾಂನಲ್ಲಿ ಬ್ರೇಕಪ್​ ವಿಚಾರ ಪ್ರಸ್ತಾಪಿಸಿದ್ದಾರೆ. ‘ದುರದೃಷ್ಟವಶಾತ್ ಲೈಫ್​ನಲ್ಲಿ ನಾವಿಬ್ಬರೂ ವಿರುದ್ಧ ದಿಕ್ಕಿನಲ್ಲಿ ನಿಲ್ಲಬೇಕಾಗಿದೆ. ಆದ್ದರಿಂದ ನಾವಿಬ್ಬರು ಒಂಟಿ ದಾರಿಯಲ್ಲಿ ನಡೆಯಬೇಕಾಗಿದೆ. ಆದರೆ, ಈ ಯಂಗ್ ಲೇಡಿ ಯಾವತ್ತಿಗೂ ನನ್ನ ಅತ್ಯುತ್ತಮ ಸಂಗಾತಿಯಾಗಿರುತ್ತಾಳೆ. ಅವಳು ನನ್ನ ಸ್ನೇಹಿತೆಯಾಗಿದ್ದಕ್ಕೆ ಕೃತಜ್ಞತೆಗಳು’ ಎಂದು ಬ್ರೇಕಪ್​ ನೋಟ್​ ಬರೆದುಕೊಂಡಿದ್ದಾರೆ. ಈ ಬಗ್ಗೆ ಶೃತಿ ಕಡೆಯಿಂದ ಯಾವುದೇ ರಿಯಾಕ್ಷನ್ ಬಂದಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos