ಶ್ರೀಕೃಷ್ಣ ಜನ್ಮಾಷ್ಟಮಿಯ ಭರ್ಜರಿ ಆಚರಣೆ

ಶ್ರೀಕೃಷ್ಣ ಜನ್ಮಾಷ್ಟಮಿಯ ಭರ್ಜರಿ ಆಚರಣೆ

ಬೆಂಗಳೂರು, ಆ. 23: ನಗರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಭರ್ಜರಿ ಸಿದ್ದತೆಯಲ್ಲಿ ತೊಡಗಿರುವ ಸಾರ್ವಜನಿಕರು ನಗರದ ಮಾರುಕಟ್ಟೆಗೆ ಬೆಳಿಗ್ಗೆಯಿಂದಲೇ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಜನ್ಮಾಷ್ಟಾಮಿಯನ್ನು ಅದ್ಧೂರಿಯಾಗಿ ಆಚರಿಸುವ ಉದ್ದೇಶದೊಂದಿಗೆ, ನಗರದ ಕೃಷ್ಣರಾಜ ಮಾರುಕಟ್ಟೆಯಲ್ಲಿ ನೂಕು ನುಗ್ಗಲುಂಟಾಗಿತ್ತು. ತರಕಾರಿ ಹಾಗೂ ಹೂವಿನ ಮಾರುಕಟ್ಟೆಯಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಜನದಟ್ಟಣೆ ಕಂಡು ಬಂತು.

ಬಹುತೇಕ ಮಹಿಳೆಯರೆ ಹೆಚ್ಚು ಆಗಮಸಿದ್ದು, ಕಂಡು ಬಂದಿದೆ. ಶಾಲೆಗಳಲ್ಲಿ ಶ್ರೀಕೃಷ್ಣನ ವಿವಿಧ ಸ್ಪರ್ಧೆಗಳು ಆಯೋಜಿಸವುದು ವಾಡಿಕೆ. ಮಹಿಳೆಯರು ತಮ್ಮ ಮಕ್ಕಳನ್ನು ಶ್ರೀಕೃಷ್ಣನ ವಿವಿಧ ವೇಶಭೂಷಗಳಿಂದ ಅಲಂಕರಿಸಲು ಹಿಂದಿನ ದಿನದಿಂದಲೇ ತಯಾರಿ ಆರಂಭಿಸಿರುವುದಾಗಿ ಮಹಿಳೆಯೊಬ್ಬರು ಹೇಳಿದರು.

ನೂರಾರು ಪಾತ್ರಗಳಲ್ಲಿ ಮಕ್ಕಳನ್ನು ಅಲಂಕರಿಸುವುದು ಶ್ರೀಕೃಷ್ನಜನ್ಮಾಷ್ಟಮಿಯ ವಿಶೇಷವೂ ಇದೆ. ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಶುಭ ಕಾರ್ಯಕ್ರಮಗಳನ್ನು ಮಾಡಲು ಪ್ರಾಶಸ್ತ್ಯ ಕಾಲವಾಗಿಉರವುದರಿಂದ, ತರಕಾರಿ ಮತ್ತು ಹೂವಿನ ದರಗಳು ಗಗನಕ್ಕೇರಿದ್ದರೂ ಲೆಕ್ಕಿಸದೆ ವಿವಿಧ ಬಗೆಯ ತರಕಾರಿ ಹಾಗು ಹೂವಿನ ಮಾರುಕಟ್ಟೆ ವೆರೈಟಿ ಹೂವುಗಳ ಖರೀದಿ ಭರಾಟೆಯಿಂದಲೇ ಸಾಗಿತ್ತು. ಶಾಲಾ ಕಾಲೇಜುಗಳಲ್ಲಿ ಪುಟ್ಟ ಮಕ್ಕಳಿಂದ ದೊಡ್ಡವರವರೆಗೆ ವಿವಿಧ ವೇಶಭೂಷಣಗಳಿಂದ ಅಲಂಕೃತಗೊಳಿಸಿ ಸ್ಪರ್ಧೆಗಳನ್ನು ಏರ್ಪಡಿಸುವುದು ಜನ್ಮಷ್ಟಮಿಯ ವಿಶೇಷವೆಂದು ಮಾರುಕಟ್ಟೆಯಲ್ಲಿ ವಿವಿದ ಬಗೆಯ ಹೂವು ಖರೀದಿ ಮಾಡುತ್ತಿದ್ದ ಸಂಪಂಗಿರಾಮನಗರದ ಮಹಿಳೆ ಸುಜಾತ ತಿಳಿಸಿದರು.

ಗುಲಾಬಿ, ಕಕಡ, ಮಲ್ಲಗೆ, ಸಂಪಿಗೆ, ವಿವಿದ ರೀತಿಯಲ್ಲಿ ವಿಶೇಷವಾಗಿ ತಯಾರಿಸಿಕೊಂಡು ಬಂದಿದ್ದ, ಅಂಗಡಿಗಳಲ್ಲಿ ಮಹಿಳೆಯರು ನಾ-ಮುಂದು ತಾ-ಮುಂದು ಎಂದು  ಮುಗಿ ಬೀಳುತ್ತಿದ್ದ ದೃಷ್ಯಗಳು ಸಾಮಾನ್ಯವಾಗಿ ಕಂಡುಬಂದವು.

 

ಫ್ರೆಶ್ ನ್ಯೂಸ್

Latest Posts

Featured Videos