ಶ್ರೀಯಾ ಶರಣ್ ಸಾರ್ವಜನಿಕ ಸ್ಥಳದಲ್ಲೇ ಲಿಪ್ಲಾಕ್!

ಶ್ರೀಯಾ ಶರಣ್ ಸಾರ್ವಜನಿಕ ಸ್ಥಳದಲ್ಲೇ ಲಿಪ್ಲಾಕ್!

ಕನ್ನಡದ ಚಂದ್ರ ಚಿತ್ರದಲ್ಲಿ ಅಭಿನಯಿಸಿದ್ದ ಸೌತ್ ಸುಂದರಿ ಶ್ರೀಯಾ ಶರಣ್ ಆ ಬಳಿಕ ಮಿಂಚಿದ್ದು ಬಾಲಿವುಡ್, ಕಾಲಿವುಡ್, ಟಾಲಿವುಡ್ನಲ್ಲಿ. ಯಾವಾಗ ರಜನಿಕಾಂತ್ ಜತೆಗಿನ  ‘ಶಿವಾಜಿ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಯ್ತೋ, ಬಳುಕುವ ಬಳ್ಳಿ ಶ್ರೀಯಾ ಹಿಂತಿರುಗಿ ನೋಡಲೇ ಇಲ್ಲ. ಒಂದಷ್ಟು ತಮಿಳು-ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದ ನಟಿ, ಬಳಿಕ ಬಾಲಿವುಡ್ನತ್ತ ಮುಖ ಮಾಡಿದ್ದರು. ಅಲ್ಲೂ ಕೂಡ ಒಂದಷ್ಟು ಹಿಟ್ ಸಿನಿಮಾಗಳನ್ನು ನೀಡಿದ ಶ್ರೀಯಾ ಏಕಾಏಕಿ ಮಾಯವಾಗಿದ್ದರು. ಆದರೀಗ ಮತ್ತೊಮ್ಮೆ ಸೌತ್ ಸುಂದರಿ ಸುದ್ದಿಯಲ್ಲಿದ್ದಾರೆ. ಶ್ರೀಯಾ ಶರಣ್ ಮತ್ತೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಅದು ಕೂಡ ಹ್ಯಾಂಡ್ಸಂ ಹಂಕ್ ಒಬ್ಬರ ಜೊತೆಯಲ್ಲಿ ಎಂಬುದು ವಿಶೇಷ. ಹೌದು, ನಟಿ ಶ್ರೀಯಾ ವಿದೇಶಿ ಪತಿ ಆಂಡ್ರೆ ಜೊತೆಯಾಗಿ ದೀಪಾವಳಿ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಖ್ಯಾತಿಯ ನಿರ್ಮಾಪಕ ರಮೇಶ್ ತೌರಾನಿ ಏರ್ಪಡಿಸಿದ್ದ ದೀಪಾವಳಿ ಔತಣಕೂಟದಲ್ಲಿ ಶ್ರೀಯಾ ಪತಿಯೊಂದಿಗೆ ಆಗಮಿಸಿದ್ದರು.

ಲೆಹಂಗಾದಲ್ಲಿ ಸುರಸುಂದರಿಯಾಗಿ ಮಿಂಚುತ್ತಿದ್ದ ಶ್ರೀಯಾ ಕ್ಯಾಮೆರಾಗಳಿಗೆ ಪತಿಯೊಂದಿಗೆ ಪೋಸು ನೀಡಿದರು. ಇದೇ ವೇಳೆ ಒಂದು ಹೆಜ್ಜೆ ಮುಂದೆ ಹೋದ ನಟಿ ಪತಿಗೆ ಲಿಪ್ ಲಾಕ್ ಮಾಡಲು ಮುಂದಾದರು. ಮೊದಲಿಗೆ ಸಾರ್ವಜನಿಕ ಸ್ಥಳದಲ್ಲಿ ಕಿಸ್ಗೆ ಪತಿ ಒಪ್ಪಿರಲಿಲ್ಲ. ಆದರೂ ಲಿಫ್ಟ್ ಏರುವ ಮೊದಲು ಆಂಡ್ರೆಗೆ ಲಿಪ್ ಲಾಕ್ ಮಾಡಿದರು. ಅಷ್ಟರಲ್ಲಾಗಲೇ ಅಲ್ಲಿದ್ದ ಕ್ಯಾಮೆರಾ ಕಣ್ಣುಗಳು ಕ್ಲಿಕ್ ಆದವು. ಶ್ರೀಯಾ ಪತಿ ಆಂಡ್ರೆ ರಷ್ಯಾ ಮೂಲದ ಉದ್ಯಮಿಯಾಗಿದ್ದು, 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಈ ವಿಷಯವನ್ನು ಗೌಪ್ಯವಾಗಿಯೇ ನಟಿ ಶ್ರೀಯಾ ಕಾಪಾಡಿಕೊಂಡು ಬಂದಿದ್ದರು. ಇದೀಗ ಒಂದೇ ಒಂದು ಕಿಸ್ ಮೂಲಕ ತಮ್ಮ ಮದುವೆ ವಿಚಾರವನ್ನು ಶ್ರೀಯಾ ಶರಣ್ ಸಾರ್ವಜನಿಕವಾಗಿ  ತೆರೆದಿಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos