ನಾನು ರಾಜೀನಾಮೆ ನೀಡಲು ಸಿದ್ದ: ಶ್ರೀರಾಮುಲು

ನಾನು ರಾಜೀನಾಮೆ ನೀಡಲು ಸಿದ್ದ: ಶ್ರೀರಾಮುಲು

ಬೆಂಗಳೂರು, ಜೂ. 25: ಇಂದು ನಗರದಲ್ಲಿ ನಡೆಯುತ್ತಿರುವ ವಾಲ್ಮೀಕಿ ಸಮುದಾಯದಿಂದ ಪರಿಶಿಷ್ಟ ಪಂಗಡದವರಿಗೆ ಶೇ. 7.5 ರಷ್ಟು ಮೀಸಲಾತಿಗೆ ಒತ್ತಾಯಿಸಿ ಧರಣಿ ನಡೆಸುತ್ತುದ್ದು, ಈ ಧರಣಿಯಲ್ಲಿ ಬಿಜೆಪಿ ಶಾಸಕ ಶ್ರೀರಾಮುಲು ಅವರು ಕೂಡ ಪಾಲ್ಗೊಂಡಿದ್ದಾರೆ.

ಈ ವೇಳೆ ಮಾತನಾಡಿದ ಶ್ರೀರಾಮುಲು, ಸರ್ಕಾರ ಮೀಸಲಾತಿ ನೀಡುವವರೆಗೂ ನಾನು ಬಿಡಲ್ಲ. ಸ್ವಾಮೀಜಿ ಒಪ್ಪಿದರೆ ಈಗಲೇ ನಾನು ಈ ವೇದಿಕೆಯಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ನಾವು ಬೀದಿಗೆ ಬಂದರೆ ಯಾರ ಮಾತೂ ಕೇಳಲ್ಲ. ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಕೊಟ್ಟ ಭಿಕ್ಷೆಯಿಂದ ಇಂದು ನಾವು ರಾಜಕಾರಣದಲ್ಲಿದ್ದೇವೆ. ನಾವು ಈ ಸ್ಥಾನದಲ್ಲಿರಲು ಸ್ವಾಮೀಜಿಗಳು ಕಾರಣರಾಗಿದ್ದಾರೆ. ಸ್ವಾಮೀಜಿಗಳ ಆಶೀರ್ವಾದದಿಂದ ನಾವು ಇಂದು ಇಲ್ಲಿದ್ದೇವೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಸಮಾಜಕ್ಕಾಗಿ ಕೆಲಸ ಮಾಡಬೇಕು ಎಂದು ಬಿಜೆಪಿ ಶಾಸಕ ಶ್ರೀರಾಮುಲು ಅವರು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos