ವಿದ್ಯಾರ್ಥಿಗಳಿಗೆ ಸಂಶೋಧನೆಯ ಹಾದಿ ತೋರಿಸಿ

ವಿದ್ಯಾರ್ಥಿಗಳಿಗೆ ಸಂಶೋಧನೆಯ ಹಾದಿ ತೋರಿಸಿ

ಮಹದೇವಪುರ, ಡಿ. 20: ಉಪಾಧ್ಯಾಯರ ಪಾತ್ರ ಕೇವಲ ಬೋಧಿಸುವುದು ಮಾತ್ರವಲ್ಲದೆ, ವಿಧ್ಯಾರ್ಥಿಗಳನ್ನು ಸಂಶೋಧನೆಯತ್ತ ಪ್ರೋತ್ಸಾಹಿಸಬೇಕು ಎಂದು ಪ್ರೋಫಸರ್ ಎ.ಎಸ್ ದೇಶಪಾಂಡೆ ತಿಳಿಸಿದರು.

ಮಾರತಹಳ್ಳಿ ಸಮೀಪದ ನ್ಯೂ ಹಾರಿಜಾನ್ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಎ.ಐ.ಸಿ.ಟಿ.ಇ ಪ್ರಾಯೋಜಿತ, ವಿ.ಟಿ.ಯು ಮತ್ತು ಕ್ಯಾಪ್ ಜೆಮಿನಿ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೃಜನಾತ್ಮಕ ತಾಂತ್ರಿಕ, ನಿರ್ವಹಣೆ ಮತ್ತು ವಿಜ್ಞಾನ ಅಂತರ್ರ್ರಾಷ್ಟ್ರೀಯ ಸಮ್ಮೆಳನ ಸಮಾರಂಭವನ್ನು ಉದ್ಘಾಟಿಸಿ ನಂತರ ಮಾತನಾಡಿದರು.

ಸಂಶೋಧನಾ ಲೇಖನಗಳು ಒಂದು ವಿಷಯದ, ಯೋಚನೆಗಳ ಪರಿಷ್ಕರಣೆ ಮತ್ತು ಪ್ರಕ್ರಿಯೆಯ ಸಂಸ್ಕರಣೆಗಳ ಅವಿಷ್ಕಾರವಾಗಬಹುದು ಎಂದರು. ವಿಧ್ಯಾರ್ಥಿಗಳು ಉತ್ತಮ ಇಂಜಿನಿಯರುಗಳಾಗಿ ರೂಪುಗೊಳ್ಳ ಬೇಕಾದರೆ ಉಪಾಧ್ಯಾಯರ ಪಾತ್ರ ಕೇವಲ ಬೋಧಿಸುವಲ್ಲಿ ಮಾತ್ರವಲ್ಲದೆ ವಿಧ್ಯಾರ್ಥಿಗಳನ್ನು ಸಂಶೋಧನೆಯತ್ತ ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದರು.

ಇದೇ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ್ ಅವರು ಮಾತನಾಡಿ, ಎನ್‌.ಹೆಚ್‌.ಸಿ‌.ಇ ವಿಧ್ಯಾರ್ಥಿಗಳ ಕಲಿಕೆ ಮತ್ತು ಶೈಕ್ಷಣಿಕ ಅಂತರಗಳನ್ನು ವಿಚಾರಗೊಷ್ಠಿಗಳು ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿ ಕಲಿಯ ಬಹುದಾಗಿದೆ ಎಂದರು.

ತಂತ್ರಜ್ಞಾನ ಒಂದು ಮಾರಕ ಮತ್ತು ಕ್ರಿಯತ್ಮಕ ಶಕ್ತಿ, ವಿಧ್ಯಾರ್ಥಿಗಳಿಗೆ ಅದರೊಡನೆ ಒಡಂಬಡಿಕೆ ಮಾಡಿಕೊಳ್ಳುವುದು ಬಹಳ ಮುಖ್ಯ, ಚಾಣಾಕ್ಷರಾಗಿ ಇರಿ ಮತ್ತು ಹೊಂದಿಕೊಳ್ಳುವುದನ್ನು ಕಲಿಯಿರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ನ್ಯೂಜ಼ೀಲ್ಯಾಂಡ್‌ ಮೂಲದ ಎ‌.ಎನ್‌.ಜೆಡ್ ಸಂಸ್ಥೆಯ ಭಾರತದ ಮುಖ್ಯಸ್ಥ ಕಾರ್ಲ್ ಬ್ರಾಡ್‌ಬ್ರಿಡ್ಜ್, ಸಹ ಸಂಸ್ಥಾಪಕಿ ನವೋಮಿ ಗಿಲ್, ಮುಖ್ಯಸ್ಥರಾದ ಬಿಪಿನ್ ಬಂಧು ಮಲ್ಹಾನ್, ಪ್ರೊ. ಸಂತೋನಿ ಫಾಬಿಯೋ, ಪ್ರೊ.ದುಸಾನ್ ರಡೋಸವ್ಲ್‌ಜೆವಿಕ್, ಪ್ರಭಾಕರ್ ಸೀತಾರಾಮ್ ಪುರಾಣಿಕ್ ಸೇರಿದಂತೆ ಹಲವಾರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos