ರೈಲು ಪ್ರಯಾಣಿಕರಿಗೆ ಶಾಕ್..!

ರೈಲು ಪ್ರಯಾಣಿಕರಿಗೆ ಶಾಕ್..!

ನವದೆಹಲಿ, ಡಿ. 24 : ಭಾರತೀಯ ರೈಲಿನಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ರೈಲ್ವೆ ನಿಲ್ದಾಣದಲ್ಲಿ ಸಿಗುವ ಆಹಾರ ದುಬಾರಿಯಾಗಲಿದೆ. ಚಹಾ, ಉಪಹಾರ ಮತ್ತು ಇತರ ಆಹಾರದ ಬೆಲೆ ಹೆಚ್ಚಾಗ್ತಿದೆ. ರಾಜಧಾನಿ, ಶತಾಬ್ಡಿ ಮತ್ತು ಡುರಾಂಟೊದಲ್ಲಿ ಸಿಗುವ ಆಹಾರ ಬೆಲೆ ಹೆಚ್ಚಳ ಮಾಡಿರುವುದಾಗಿ ಐ.ಆರ್.ಸಿ.ಟಿ.ಸಿ. ಹೇಳಿದೆ.

ಹೊಸ ದರದ ಪ್ರಕಾರ ಎಕ್ಸ್ ಪ್ರೆಸ್ ರೈಲಿನ ಸಸ್ಯಹಾರಿ ಉಪಹಾರದ ಬೆಲೆ 35 ರೂಪಾಯಿ ಹಾಗೂ ಮಾಂಸಹಾರಿ ಉಪಹಾರ ಬೆಲೆ 45 ರೂಪಾಯಿಗೆ ಲಭ್ಯವಾಗಲಿದೆ. ರಾಜಧಾನಿ, ಶತಾಬ್ದಿ ಮತ್ತು ಡುರಾಂಟ್ ರೈಲಿನ ಎಸಿ ಪ್ರಥಮ ದರ್ಜೆ ಆಹಾರದ ಬೆಲೆ 140 ರೂಪಾಯಿಯಾಗಲಿದೆ. ಹೊಸ ಆಹಾರದ ಬೆಲೆಯಲ್ಲಿ ಜಿ.ಎಸ್.ಟಿ. ಸೇರಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ವೆಬ್ಸೈಟ್ ನಲ್ಲಿ ಟೀ, ಉಪಹಾರ, ಸಸ್ಯಹಾರ, ಮಾಂಸಹಾರ ಸೇರಿದಂತೆ ಎಲ್ಲ ರೀತಿಯ ಆಹಾರದ ಬೆಲೆ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos