ಶಿವಕುಮಾರಸ್ವಾಮಿಗಳ ಜನ್ಮದಿನವನ್ನು ದಾಸೋಹದ ದಿನವನ್ನಾಗಿ ಆಚರಿಸೋಣ

ಶಿವಕುಮಾರಸ್ವಾಮಿಗಳ ಜನ್ಮದಿನವನ್ನು ದಾಸೋಹದ ದಿನವನ್ನಾಗಿ ಆಚರಿಸೋಣ

ತುಮಕೂರು, ಏ. 2, ನ್ಯೂಸ್ ಎಕ್ಸ್ ಪ್ರೆಸ್: ನಾವೆಲ್ಲರೂ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಮಾರ್ಗದಲ್ಲಿ ಸಾಗಬೇಕಿದೆ. ಅವರ ಜನ್ಮದಿನವನ್ನು ಕಾಯಕದ ದಿನವನ್ನಾಗಿ, ದಾಸೋಹದ ದಿನವನ್ನಾಗಿ ಮಾಡುವ ಮೂಲಕ ಶ್ರೀಗಳಿಗೆ ಗುರುವಂದನೆ ಸಲ್ಲಿಸಬೇಕಿದೆ ಎಂದು ಸಿದ್ದಗಂಗಾ ಮಠದ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು. ತುಮಕೂರು ನಾಗರಿಕ ವೇದಿಕೆ ವತಿಯಿಂದ ಲಿಂ. ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ 112ನೇ ಜನ್ಮದಿನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ತುಮಕೂರಿನ ಜನರು ಶ್ರೀಗಳ ಬಗ್ಗೆ ಇಟ್ಟಿರುವ ಅಪಾರ ನಂಬಿಕೆಗೆ ನಾನು ಆಭಾರಿಯಾಗಿದ್ದೇನೆ. ಅವರ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ. ಈ ದಿನವನ್ನು ಕಾಯಕದ ದಿನವನ್ನಾಗಿ, ದಾಸೋಹದ ದಿನವನ್ನಾಗಿ ಮಾಡುವ ಮೂಲಕ ಶ್ರೀಗಳಿಗೆ ಗುರುವಂದನೆ ಸಲ್ಲಿಸಿ ಎಂದು ಸಲಹೆ ನೀಡಿದರು. ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರಿಗೂ ಈ ಕಾಲೇಜು ಮೈದಾನಕ್ಕೂ ಅವಿನಾಭಾವ ಸಂಬಂಧವಿದೆ. ಇನ್ನು ಈ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಿರುವುದೇ ವಿಶೇಷ. ಏಕೆಂದರೆ ಈ ಸ್ಥಳಕ್ಕೆ ಗಾಂಧೀಜಿ ಭೇಟಿ ನೀಡಿದ್ದರು. ಶ್ರೀಗಳು ಶಿಕ್ಷಣ ಪಡೆಯುವ ಸಂದರ್ಭ ಕೆಲ ದಿನಗಳ ಕಾಲ ಈ ಸ್ಥಳದಲ್ಲಿ ಉಳಿದುಕೊಂಡಿದ್ದರು. ಆದ್ದರಿಂದ ಶ್ರೀಗಳಿಗೂ ಈ ಸ್ಥಳಕ್ಕೂ ಒಂದು ರೀತಿಯ ಬಾಂಧವ್ಯವಿದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos