ಶಿವಾಜಿ ಶಾಖೆಯ ವತಿಯಿಂದ 5ನೇ ಅಂತಾರಾಷ್ಟ್ರೀಯ ಯೋಗ

ಶಿವಾಜಿ ಶಾಖೆಯ ವತಿಯಿಂದ 5ನೇ ಅಂತಾರಾಷ್ಟ್ರೀಯ ಯೋಗ

ಬೆಂಗಳೂರು, ಜೂ. 21: ಟಿ, ದಾಸರಹಳ್ಳಿಯ ಹಾವನೂರು ಬಡಾವಣೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿವಾಜಿ ಶಾಖೆಯ ವತಿಯಿಂದ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗಾಭ್ಯಾಸ ಮತ್ತು ಯೋಗಾಸನಗಳ ಪ್ರದರ್ಶನವನ್ನು ಬೆಳಿಗ್ಗೆ 6-15 ರಿಂದ ಹಾವನೂರು ಬಡಾವಣೆಯ ಹೈ ಟೆಂಕ್ಷನ್ ಲೇನ್ ರಸ್ತೆ ಹತ್ತಿರ  ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ  ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು, ಲೇಖಕರು ಮತ್ತು ಸಾಹಿತಿಗಳು ಆದ ಪ್ರೊಫೆಸರ್ ಮಲ್ಲೇಪುರಂ ಜಿ ವೆಂಕಟೇಶ ರವರು ಮತ್ತು  ದಾ‌ಸರಹಳ್ಳಿ ಭಾಗ ಸಂಘಚಾಲಕರಾದ ಶ್ರೀ ಶಿವಲಿಂಗಯ್ಯರವರು ಉಪಸ್ಥಿತರಿದ್ದರು,

ದಿವ್ಯ ಜ್ಯೋತಿ ಜಾಗ್ರತಿ ಸಂಸ್ಥಾನದ ಸಾಧ್ವಿ ಉನ್ಮೇಷ ಭಾರತಿಯವರಿಗೆ,

ಯೋಗಗುರುಗಳಾದ ಉಮಾಮಹೇಶ್ವರ, ವೀಣಾ ಲೋಕೇಶ್, ಗೀತರಾಣಿ ಯವರಿಗೆ, ಕ್ರೀಡಾ ಕ್ಷೇತ್ರದ ಸಾಧಕರಾದ ಲಕ್ಷ್ಮಣ್, ಪ್ರತಾಪ್ ಸಿಂಗ್ ಮತ್ತು ಗೋಪಾಲಕೃಷ್ಣ ಭಟ್ ಇವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು,

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು, ಯೋಗ ಪ್ರೇಮಿಗಳು ಹೀಗೆ 350 ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos