ದಕ್ಷಿಣ ಶಿರಡಿಯಲ್ಲಿ ಅದ್ದೂರಿ ಗುರುಪೂರ್ಣಿಮೆ

ದಕ್ಷಿಣ ಶಿರಡಿಯಲ್ಲಿ ಅದ್ದೂರಿ ಗುರುಪೂರ್ಣಿಮೆ

ಪೀಣ್ಯದಾಸರಹಳ್ಳಿ, ಜು. 17: ಗುರುಬ್ರಹ್ಮ ಗುರು ವಿಷ್ಣು, ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೆ ನಮಃ’ ಮಂಗಳವಾರ ದೇಶದೆಲ್ಲೆಡೆ ಗುರು ಪೂರ್ಣಿಮೆಯನ್ನಾಗಿ ಆಚರಣೆ ಮಾಡಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನ ತಮ್ಮ ಗುರುಗಳಿಗೆ ಶ್ರಾಧಾ ಭಕ್ತಿಯಿಂದ ಪೂಜೆ, ಪುರಸ್ಕಾರ ಮಾಡಿ ಸೇವೆ ಮಾಡಿದ್ದಾರೆ.

ಪಾಲಕರನ್ನು ಸತ್ಕರಿಸುವ ಸಂಸ್ಕಾರ ಹಾಗೂ ಗುರು ಹಿರಿಯರನ್ನು ಗೌರವಿಸುವ ಸತ್ಕಾರ್ಯ  ಸ್ವಸ್ಥ ಸಮಾಜವನ್ನು ಸೃಷ್ಟಿಸುತ್ತದೆ  ಎಂದು ದಕ್ಷಿಣ ಶಿರಡಿ ಶ್ರೀ  ಸಾಯಿ ಮಂದಿರ ಮತ್ತು ದತ್ತ ಪೀಠದ ಸಂಸ್ಥಾಪಕ ಶ್ರೀ ರಘುನಂದನ್ ಗುರೂಜಿ ತಿಳಿಸಿದ್ದಾರೆ.

ಸಮೀಪದ ಶ್ರೀ  ಸಾಯಿ ಮಂದಿರದಲ್ಲಿ ಅದ್ಧೂರಿಯಾಗಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮನುಷ್ಯನ ಯಶಸ್ಸಿಗೆ ದೈವಾನುಗ್ರಹ ಎಷ್ಟು ಮುಖ್ಯವೋ  ತಂದೆ ತಾಯಿ, ಗುರು ಹಿರಿಯರ ಆಶೀರ್ವಾದವವೂ ಅಷ್ಟೇ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ  ಮಕ್ಕಳು ಪಾಲಕರನ್ನು  ಆಧರಿಸುವ ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.

ಇದೇ ಸಮಯದಲ್ಲಿ ಮಾತನಾಡುತ್ತಿದ್ದ ಅವರು ಭಕ್ತರಿಗಾಗಿ ಶ್ರೀ ಕ್ಷೇತ್ರದಲ್ಲಿ  ಅನ್ನದಾಸೋಹಕ್ಕಾಗಿ ಪಾಕಶಾಲೆ,   ಧ್ಯಾನಮಂದಿರ, ಗೋಶಾಲೆ ಹಾಗೂ 18 ಅಡಿ ಎತ್ತರದ   ಬೃಹತ್ ಶ್ರೀ ಸಾಯಿಬಾಬಾರ ಮೂರ್ತಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.  ಈ ವೇಳೆ ತಿಳಿಸಿದ ಅವರು

ಶಿರಡಿ ಸಾಯಿಬಾಬಾರ ಬಾಬಾರನ್ನೇ ಹೋಲುವ   ವಡ್ಡರಹಳ್ಳಿಯ ದಕ್ಷಿಣ ಶಿರಡಿ ಶ್ರೀ ಸಾಯಿಬಾಬಾ ಮಂದಿರ ಹಾಗೂ ದತ್ತಪೀಠದಲ್ಲಿ ಗುರು ಪೂರ್ಣಿಮೆ ವಿಜೃಂಭಣೆಯಿಂದ ನಡೆಯಿತು.

ವಿಶೇಷ ಅಲಂಕಾರ

ದೇವಸ್ಥಾನವನ್ನು ವಿಶೇಷ ಹೂವು ಹಾಗೂ  ದೀಪ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮುಂಜಾನೆಯಿಂದಲೇ ಧಾರ್ಮಿಕ ಕೈಂಕರ್ಯಗಳು ಸಾಂಗವಾಗಿ ನೆರವೇರಿದವು. ಬಾಬಾರಿಗೆ ಕ್ಷೀರಾಭಿಷೇಕ ತೋಮಾಲೆ ಸೇವೆ,  ವಸ್ತ್ರ ಸೇವೆ ನೆರವೇರಿಸಲಾಯಿತು. ಅಂತೆಯೇ ಲೋಕ ಕಲ್ಯಾಣಕ್ಕಾಗಿ ದಿನವಿಡೀ ಧಾರ್ಮಿಕ ಕೈಂಕರ್ಯಗಳು ಜರುಗಿದವು  ವಿಶೇಷವಾಗಿ  ಆರೋಗ್ಯ ವೃದ್ಧಿಗೆ ಧನ್ವಂತರಿ ಹೋಮ  ನಡೆಯಿತು.

ದತ್ತಾತ್ರೇಯ ಅಭಿಷೇಕ

ಪಂಚಾಮೃತ ಅಭಿಷೇಕ,  ಹೋಮ ಹವನ ,ಪೂಜೆ ಭಜನಾ ಕಾರ್ಯಕ್ರಮಗಳು ಜರುಗಿದವು. ಭಕ್ತರು ಸರತಿ ಸಾಲಿನಂತೆ ನಿಂತು  ಶ್ರೀ ಸದ್ಗುರು ಬಾಬಾರ ದರ್ಶನ ಪಡೆದು ಪಾದುಕೆಗೆ ನಮಸ್ಕರಿಸಿ ಶ್ರದ್ಧಾ ಭಕ್ತಿ ಮೆರೆದು ಪುನೀತರಾದರು. ಇಷ್ಟಾರ್ಥಗಳನ್ನು ನೆರವೇರಿಸುವಂತೆ ಬೇಡಿಕೊಂಡರು.

ನೆರೆ ರಾಜ್ಯ

ನೆಲಮಂಗಲ, ಬೆಂಗಳೂರು, ಮೈಸೂರು, ಶಿವಮೊಗ್ಗ,  ಬೆಳಗಾವಿ, ರಾಯಚೂರು, ಕೋಲಾರವಲ್ಲದೆ ಇಡೀ ನಾಡು,  ನೆರೆ ರಾಜ್ಯ ತಮಿಳುನಾಡು ಅಷ್ಟೇ ಏಕೆ ದೂರದ ಅಮೇರಿಕ  ಹಾಗೂ ಕೆನಡಾದಿಂದಲೂ ಅಪಾರ ಸಂಖ್ಯೆಯ ಭಕ್ತ ಸಮೂಹ ಬಾಬಾರ ದರ್ಶನಕ್ಕೆ ಭಕ್ತರ ದಂಡೆ ಹರಿದು ಬಂದಿತ್ತು. ಎಲ್ಲರಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಒಟ್ಟಾರೆ ವಡ್ಡರಹಳ್ಳಿಯ ದಕ್ಷಿಣ ಶಿರಡಿ

ಶ್ರೀ ಸಾಯಿಬಾಬಾ ಮಂದಿರದಲ್ಲಿ ಭಕ್ತರು ಗುರು ಪೂರ್ಣಿಮೆಯಲ್ಲಿ ಮುಂಜಾನೆಯಿಂದ ಸಾಯಂಕಾಲದವರೆಗೂ ಮಿಂದೆದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos