ಶಿವಮೊಗ್ಗದಲ್ಲಿ ವೋಟಿಗೆ 25,000!, ಉಂಗುರ, ಓಲೆ, ಅಬ್ಬಬ್ಬಾ!

ಶಿವಮೊಗ್ಗದಲ್ಲಿ ವೋಟಿಗೆ 25,000!, ಉಂಗುರ, ಓಲೆ, ಅಬ್ಬಬ್ಬಾ!

ಶಿವಮೊಗ್ಗ, ಏ. 29, ನ್ಯೂಸ್ ಎಕ್ಸ್ ಪ್ರೆಸ್:  ಶಿವಮೊಗ್ಗ ಹಾಲು ಒಕ್ಕೂಟ(ಶಿಮುಲ್‌) ಮಂಡಳಿಗೆ ಚುನಾವಣೆ ನಡೆಯುತ್ತಿದ್ದು, ಮಾಚೇನಹಳ್ಳಿ ಶಿಮುಲ್ ಕಚೇರಿಯಲ್ಲಿ ಮತದಾನ ನಡೆಯುತ್ತಿದೆ. ಆದರೆ, ಬಿಜೆಪಿ, ಜೆಡಿಎಸ್ ಬೆಂಬಲಿತ ಬಣಗಳ ಮಧ್ಯೆ ಪೈಪೋಟಿ ಎದುರಾಗಿದ್ದು, ​ಶಿಮುಲ್ ಚುಕ್ಕಾಣಿ ಹಿಡಿಯಲು ಅಭ್ಯರ್ಥಿಗಳು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆ ವ್ಯಾಪ್ತಿ ಒಳಗೊಂಡ ಶಿವಮೊಗ್ಗ ಹಾಲು ಒಕ್ಕೂಟದ 14 ಸ್ಥಾನಗಳಿಗಾಗಿ ನಡೆಯುತ್ತಿರುವ ಚುನಾವಣೆಯಲ್ಲಿ 31 ಅಭ್ಯರ್ಥಿಗಳು ಕಣದಲ್ಲಿದಲ್ಲಿದ್ದು, 1 ವೋಟಿಗೆ 25 ಸಾವಿರ, ಪುರುಷರಿಗೆ ಚಿನ್ನದ ಉಂಗುರ, ಮಹಿಳೆಯರಿಗೆ ಚಿನ್ನದ ಒಲೆ, 1 ಬೆಳ್ಳಿ ನಾಣ್ಯ ವಿತರಿಸಲಾಗುತ್ತಿದೆ. ಇಂದು ಬೆಳಗ್ಗೆ 9ರಿಂದ ಆರಂಭವಾಗಿರುವ ಮತದಾನ ಸಂಜೆ 4ರ ವರೆಗೆ ನಡೆಯಲಿದೆ. ಮತದಾನ ಅಂತ್ಯದ ಬಳಿಕ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ರಾತ್ರಿ 8 ಗಂಟೆ ಹೊತ್ತಿಗೆ ಫಲಿತಾಂಶ ಹೊರಬೀಳಲಿದೆ. 835 ಸದಸ್ಯರ ಮತಗಳಿದ್ದು, ಮತಗಳಿಗಾಗಿ ಮತದಾರರಿಗೆ ಆಮಿಷವೊಡ್ಡಿದ ಬಗ್ಗೆ ವಾಟ್ಸ್​ಆ್ಯಪ್​​ನಲ್ಲಿ ವೈರಲ್ ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos