ಪುತ್ರ ವಿಯಾನ್ ಗೆ ಕೃತಜ್ಞತೆ ಸಲ್ಲಿಸಿದ ನಟಿ ಶಿಲ್ಪಶೆಟ್ಟಿ!

ಪುತ್ರ ವಿಯಾನ್ ಗೆ  ಕೃತಜ್ಞತೆ ಸಲ್ಲಿಸಿದ ನಟಿ ಶಿಲ್ಪಶೆಟ್ಟಿ!

ಮುಂಬೈ ಮೇ. 21, ನ್ಯೂಸ್ ಎಕ್ಸ್ ಪ್ರೆಸ್ : ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಮುದ್ದಿನ ಮಗ ವಿಯಾನ್​ಗೆ 7ನೇ ವರ್ಷದ ಜನ್ಮದಿನದ ಸಂಭ್ರಮ.

ಶಿಲ್ಪಾಶೆಟ್ಟಿ ಇನ್​ಸ್ಟಾಗ್ರಾಂನಲ್ಲಿ ಮಗನ ಭಾವಚಿತ್ರಗಳ ವಿಡಿಯೋವನ್ನು ಶೇರ್​ ಮಾಡಿ ಭಾವನಾತ್ಮಕವಾದ ಸಾಲುಗಳನ್ನು ಬರೆದಿದ್ದಾರೆ. ನಿನೀಗ ಏಳನೇ ವರ್ಷಕ್ಕೆ ಕಾಲಿಟ್ಟಿದ್ದೀಯ. ಅದೆಷ್ಟು ಬೇಗ ಸಮಯ ಕಳೆಯುತ್ತದೆ ಎಂಬ ಬಗ್ಗೆ ಅಚ್ಚರಿಯುಂಟಾಗುತ್ತಿದೆ. ನಿರೀಕ್ಷೆ, ನಿರ್ಬಂಧಗಳೇ ಇಲ್ಲದೆ ಪ್ರೀತಿಯಲ್ಲಿ ನನಗೆ ನಂಬಿಕೆ ಹುಟ್ಟಿಸಿದ್ದು ನೀನು. ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿದ್ದಕ್ಕೆ ಮತ್ತು ಪ್ರತಿದಿನ ಒಂದಲ್ಲ ಒಂದು ವಿಚಾರವನ್ನು ನನಗೆ ಕಲಿಸುತ್ತಿರುವುದಕ್ಕೆ ನಿನಗೆ ಕೃತಜ್ಞತೆ ಹೇಳುತ್ತೇನೆ. ನೀನು ನಮ್ಮ ಪಾಲಿನ ಜಗತ್ತು. ನಿನ್ನ ತಂದೆ ಹಾಗೂ ತಾಯಿಯರಾದ ನಾವು ಸದಾ ನಿನ್ನನ್ನು ಹುರಿದುಂಬಿಸುತ್ತೇವೆ ಎಂದು ಬರೆದಿರುವ ಸಾಲುಗಳು ಮನಮುಟ್ಟುವಂತಿದೆ

ಫ್ರೆಶ್ ನ್ಯೂಸ್

Latest Posts

Featured Videos