ಶೀಘ್ರದಲ್ಲಿಯೇ ಯಜಮಾನ ಸಿನಿಮಾ ತೆರೆಗೆ

ಶೀಘ್ರದಲ್ಲಿಯೇ ಯಜಮಾನ ಸಿನಿಮಾ ತೆರೆಗೆ

ಸ್ಸ್ಯಾಂಡಲ್​ವುಡ್​ನ ‘ಚಾಲೆಂಜಿಂಗ್ ಸ್ಟಾರ್​’ ದರ್ಶನ್  ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಯಜಮಾನ’ ಸಿನಿಮಾ ಪ್ರಸ್ತುತ
ದಿನಗಳಲ್ಲಿ ಸದ್ದು ಮಾಡುತ್ತಿದೆ. ಇನ್ನೂ ದರ್ಶನ್ ಅಭಿಮಾನಿಗಳಂತೂ ‘ಯಜಮಾನ’ ಸಿನಿಮಾ ಯಾವಗ
ತೆರೆಗೆ ಬರಲಿದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ.

 ಎರಡು ವರ್ಷಗಳ ಗ್ಯಾಪ್​ ನಂತರ ದರ್ಶನ್ ಇದೀಗ ಮತ್ತೆ  ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುವುದರಿಂದ
ಪ್ರೇಕ್ಷರರ ನಿರೀಕ್ಷೆ ದೊಡ್ಡದಿದೆ. ಅಭಿಮಾನಿಗಳ  ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಫೆ. 28ರಂದು ಸಿನಿಮಾ ಪ್ರೇಕ್ಷಕರೆದುರು ಬರೋದು ಬಹುತೇಕ ಪಕ್ಕಾ ಆಗಿದೆ ಎಂಬುವುದು ತಿಳಿದು
ಬಂದದೆ. ಈಗಾಗಲೇ ಸಿನಿಮಾ ಸೆನ್ಸಾರ್​ ಮಂಡಳಿಯಲ್ಲಿದ್ದು, ಸೆನ್ಸಾರ್ ಮುಗಿಯುತ್ತಿದ್ದಂತೆ ಚಿತ್ರತಂಡ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಅನೌನ್ಸ್ ಮಾಡಲಿದೆ.

ದರ್ಶನ್ಹುಟ್ಟುಹಬ್ಬದ  ವಿಶೆಷ..!

ಈಗಾಗಲೆ ‘ಯಜಮಾನ ಸಿನಿಮಾದ ಹಾಡುಗಳು ಬಿಡುಗಡೆಯಾಗುದ್ದು, ಇನ್ನೇನು ಸಿನಿಮಾ
ತೆರೆಕಾಣುವುದೆ ತಡ. ಅಭಿಮಾನಿಗಳು ಸಂಭ್ರಮ ಆಚರಣೆ ಮಾಡುತ್ತಾರೆ. ಇಷ್ಟು ಮಾತ್ರವಲ್ಲದೆ, ಫೆಬ್ರವರಿ 16, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟಿದ ದಿನ. ಫೆಬ್ರವರಿ ತಿಂಗಳು ಬಂತೆಂದರೆ ದಚ್ಚು ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿರುತ್ತೆ. ಈ ಸಂಭ್ರಮಕ್ಕೆ ‘ಯಜಮಾನ’ ಸಿನಿಮಾವೂ ಸೇರ್ಪಡೆಯಾಗುವುದು
ಮತ್ತೊಂದು ವಿಶೇಷ. ರಿಲೀಸ್ ಡೇಟ್​ ಹತ್ತಿರವಾಗಿರೋದ್ರಿಂದಲೇ ‘ಯಜಮಾನ’ ಚಿತ್ರತಂಡ ಸಕಲ ಸಿದ್ಧತೆ ನಡೆಸ್ತಿದೆ

ಫ್ರೆಶ್ ನ್ಯೂಸ್

Latest Posts

Featured Videos