ಮೂಢನಂಬಿಕೆಗೆ ಜಿಲ್ಲಾಡಳಿತ ಬ್ರೇಕ್

ಮೂಢನಂಬಿಕೆಗೆ ಜಿಲ್ಲಾಡಳಿತ ಬ್ರೇಕ್

ಯಾದಗಿರಿ, ಜ. 14: ಇಂದು ಪ್ರಸಿದ್ಧ ಯಾದಗಿರಿ ಮಲ್ಲಯ್ಯ ಸ್ವಾಮಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು. ಮಕರ ಸಂಕ್ರಾಂತಿಯಂದು ನಡೆಯುವ ಜಾತ್ರೆಗೆ ಭಕ್ತರಸಾಗರವೇ ಹರಿದು ಬಂದಿತ್ತು. ಈ ಜಾತ್ರೆಯಲ್ಲಿ ನಡೆಯುವ ವಿಚಿತ್ರ ಪದ್ಧತಿ, ಮೂಢನಂಬಿಕೆಗೆ ಈ ಬಾರಿ ಜಿಲ್ಲಾಡಳಿತ ತಿಲಾಂಜಲಿ ಹಾಡಿದ್ದು ವಿಶೇಷವಾಗಿದೆ.

ಈ ಹಿಂದೆ ದೇವರಿಗೆ ಹರಕೆ ಹೊತ್ತ ಭಕ್ತರು ಕುರಿ ಮರಿಗಳನ್ನು ದೇವರ ಪಲ್ಲಕ್ಕಿ ಮೇಲೆ ಎಸೆಯುತ್ತಿದ್ದರು. ಆದರೆ ಇದು ಪ್ರಾಣಿ ಹಿಂಸೆಯಾದ ಕಾರಣ ಈ ಮೂಢನಂಬಿಕೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಹೀಗಾಗಿ ಭಕ್ತರು ತರುವ ಕುರಿ ಮರಿಗಳನ್ನು ದಾರಿಯಲ್ಲಿಯೇ ತಡೆದು ಅವುಗಳನ್ನು ಪಶುಪಾಲನಾ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ. ಈ ಬಾರಿಯ ಜಾತ್ರೆಯಲ್ಲಿ ಒಟ್ಟು 1 ಸಾವಿರ ಕುರಿ ಮರಿಗಳನ್ನು ರಕ್ಷಿಸಲಾಗಿದೆ. ಹೀಗೆ ವಶಪಡಿಸಿಕೊಂಡ ಕುರಿ ಮರಿಗಳನ್ನು ಟೆಂಡರ್ ಪ್ರಕ್ರಿಯೆ ಮೂಲಕ ಕುರಿ ಸಾಕಾಣಿಕೆ ಮಾಡುವವರಿಗೆ ಮತ್ತೆ ನೀಡಲಾಗುತ್ತಿದೆ.

ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಕಳ್ಳಕಾಕರಿಂದ ಅಪರಾಧ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕೆರೆ ಮತ್ತು ದೇವಸ್ಥಾನ ಸುತ್ತಲೂ ಈ ಬಾರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅಲ್ಲದೆ ಒಟ್ಟು 550 ಪೊಲೀಸ್ ಸಿಬ್ಬಂದಿ ಈ ಜಾತ್ರೆಯಲ್ಲಿ ಗಸ್ತು ಕಾಯುತ್ತಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos