ಜನರ ದಾಹ ನೀಗಿಸುವ ಆಟೋ ಡ್ರೈವರ್ ಶೇಕ್ ಸಲೀಮ್!

ಜನರ ದಾಹ ನೀಗಿಸುವ ಆಟೋ ಡ್ರೈವರ್ ಶೇಕ್ ಸಲೀಮ್!

ಮಾ, 30, ನ್ಯೂಸ್ ಎಕ್ಸ್ ಪ್ರೆಸ್: ಪ್ರತಿವರ್ಷದಂತೆ ಈ ವರ್ಷವೂ ಹೈದರಾಬಾದ್‌ ನಲ್ಲಿ‌ ಬಿಸಿಲ ಝಳಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಈ ದಾಹವನ್ನು ನಿವಾರಿಸಲೆಂದು ಆಟೋ ಚಾಲಕನೊಬ್ಬ ವಿನೂತನ ಯೋಜನೆಯನ್ನು‌ ಹಾಕಿಕೊಂಡಿದ್ದಾನೆ. ಹೌದು, 45 ವರ್ಷದ ಶೇಕ್ ಸಲೀಂ ತಾನು ಚಾಲನೆ ಮಾಡುವ ಆಟೋಗೆ ಕೂಲರ್ ಹಾಗೂ ಫಿಲ್ಟರ್ ಹಾಕಿಕೊಂಡಿದ್ದಾರೆ. ಈ ಕೂಲರ್ ಫಿಲ್ಟರ್‌ನಿಂದ ಶುದ್ಧವಾದ‌ ತಣ್ಣನೆಯ ನೀರು‌ ಬರುತ್ತದೆ. ಇದನ್ನು ಹೈದರಾಬಾದ್‌ ನ ಮೂಲೆ ಮೂಲೆಗೆ ಹೋಗಿ‌ ಉಚಿತವಾಗಿ ನೀಡುತ್ತಿದ್ದಾರೆ. ಪ್ರತಿನಿತ್ಯ ತಾವು ಹೋಗುವ ಆಟೋ ಸ್ಟ್ಯಾಂಡ್, ರಸ್ತೆಗಳಲ್ಲಿ ಅಗತ್ಯ ಇರುವವರಿಗೆ ನೀರು ನೀಡಿ ದಾಹ ನಿವಾರಿಸುವ ಕೆಲಸವನ್ನು ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಶೇಕ್, ಪ್ರತಿನಿತ್ಯ ಬೆಳಗ್ಗೆ 9 ಗಂಟೆಗೆ ನಾನು ಕೆಲಸ ಶುರು ಮಾಡಲಿದ್ದು, ಸಂಜೆ ಆರರ ತನಕ ಮುಂದುವರಿಸುತ್ತೇನೆ. 30 ರೂ. ಗೆ ಸಿಗುವ 20 ಲೀ ನೀರಿನ ಎರಡು ಕ್ಯಾನ್ ಖಾಲಿಯಾಗುತ್ತದೆ. ಕೆಲವೊಮ್ಮೆ ಇದು ಮೂರು ಕ್ಯಾನ್‌ ಗೆ ಏರಿಕೆಯಾಗುತ್ತದೆ. ಜನರಿಗೆ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ಈ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos