ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಅಧ್ಯಕ್ಷರಾಗಿ ಶೇಖ್ ಅಹಮದ್ ಪುನರಾಯ್ಕೆ

ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಅಧ್ಯಕ್ಷರಾಗಿ ಶೇಖ್ ಅಹಮದ್ ಪುನರಾಯ್ಕೆ

ಬ್ಯಾಂಕಾಕ್, ಥಾಯ್ಲೆಂಡ್, ಮಾ.6, ನ್ಯೂಸ್ ಎಕ್ಸ್ ಪ್ರೆಸ್: ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ (ಒಸಿಎ) ಅಧ್ಯಕ್ಷರಾಗಿ ಶೇಖ್ ಅಹಮದ್ ಅಲ್ ಫಹಾದ್ ಅಲ್ ಸಬಾಹ್ ಅವರು ಪುನರಾಯ್ಕೆಯಾಗಿದ್ದಾರೆ.

ಭಾನುವಾರ ಬ್ಯಾಂಕಾಕ್ನಲ್ಲಿ ನಡೆದ ಒಸಿಎ ಮಹಾ ಸಭೆಯಲ್ಲಿ ಶೇಖ್ ಅಹಮದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅವರು ನಾಲ್ಕು ವರ್ಷ (2019-2023) ಅಧಿಕಾರದಲ್ಲಿರಲಿದ್ದಾರೆ.

ಕುವೈತ್ನ ಶೇಖ್, 1991ರಲ್ಲಿ ಮೊದಲ ಬಾರಿಗೆ ಒಸಿಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಂದಿನಿಂದಲೂ ಅವರು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಸಿಎಯ ಐದು ವಲಯಗಳ ಉಪಾಧ್ಯಕ್ಷರಾದ ತಿಮೋಥಿ ಫೋಕ್ (ಈಸ್ಟ್ ಏಷ್ಯಾ), ಚರೌಕ್ ಅರಿರಾಚಕ್ರನ್ (ಸೌತ್ ಈಸ್ಟ್ ಏಷ್ಯಾ), ತೈಮುರ್ ಕುಲಿಬಯೇವ್ (ಸೆಂಟ್ರಲ್ ಏಷ್ಯಾ), ಸೈಯದ್ ಆರೀಫ್ ಹಸನ್ (ಸೌತ್ ಏಷ್ಯಾ) ಮತ್ತು ಥಾನಿ ಅಲ್ ಕುವಾರಿ (ವೆಸ್ಟ್ ಏಷ್ಯಾ) ಅವರು ಅಹಮದ್ಗೆ ಬೆಂಬಲ ಸೂಚಿಸಿದ್ದಾರೆ.

ಥಾಯ್ಲೆಂಡ್ನ ಖುನ್ಯಿಂಗ್ ಪತಾಮ ಲೀಸ್ವಾಡ್ಟ್ರಕುಲ್ ಮತ್ತು ಚೀನಾದ ವೀ ಜಿಜೊಂಗ್ ಅವರನ್ನು ಕ್ರಮವಾಗಿ ಒಸಿಎ ಸಾಂಸ್ಕೃತಿಕ ಸಮಿತಿ ಮತ್ತು ನೀತಿ ಆಯೋಗದ ಮುಖ್ಯಸ್ಥರುಗಳನ್ನಾಗಿ ನೇಮಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos