ಶವದ ಫೋಟೊ ಕಳಿಸು ಅಂದ್ರು ಬಿಎಂಟಿಸಿ ಡಿಪೋ ಮ್ಯಾನೇಜರ್

ಶವದ ಫೋಟೊ ಕಳಿಸು ಅಂದ್ರು  ಬಿಎಂಟಿಸಿ ಡಿಪೋ ಮ್ಯಾನೇಜರ್

ಮಾ.4, ನ್ಯೂಸ್ ಎಕ್ಸ್ ಪ್ರೆಸ್ ಬೆಂಗಳೂರು: ಸಂಬದಿಕರು ಮೃತಪಟ್ಟಿದ್ದಾರೆ ಎಂದು ರಜೆ ಕೇಳಿದರೆ ಸತ್ತವರ ಮುಂದೆ ನಿಂತು ಫೋಟೊ ತೆಗೆದು ಕಳಿಸಿ ಎಂದು  ರಿಪ್ಲೇ ನೀಡುವ ಬಿಎಂಟಿಸಿ ಡಿಪೋ ಮ್ಯಾನೇಜರ್ನಿಂದ ಏನನ್ನು ತಾನೆ ಅಪೇಕ್ಷಿಸಲಾಗುತ್ತದೆ ಹೇಳಿ. ಮನೆಯವರು ಅಥವಾ ಸಂಬಂಧಿಕರು ಸಾವನ್ನಪ್ಪಿದಾಗ ಸಿಬ್ಬಂದಿ ರಜೆ ಕೇಳಿದರೆ ಖಾಸಗಿ ಕಂಪನಿ ರಜೆ ಕೊಡುತ್ತದೆ ಆದರೆ ಬಿಎಂಟಿಸಿ ನೌಕರರೊಬ್ಬರು ರಜೆ ಕೇಳಿದಾಗ ಬಿಎಂಟಿಸಿ ಡಿಪೋ ಮ್ಯಾನೇಜರ್ ನೀಡಿದ ಉತ್ತರವಿದು ‘ಶವದ ಮುಂದೆ ನಿಂತು ಫೋಟೊ ತೆಗೆದು ಕಳುಹಿಸು ಆಗ ನಿನ್ನ ನಂಬುತ್ತೆನೆ ಅಂತ ಹೇಳಿದರು.

ಡಿಪೋ ನಂಬರ್ 33 ರಲ್ಲಿ ಸಿಬ್ಬಂದಿಒಬ್ಬ ಮೇಲಾಧಿಕಾರಿಗೆ ಡಿಪೋ ಮ್ಯಾನೇಜರ್ ವಿರುದ್ಧ ದೂರು ಬರೆದಿದ್ದಾರೆ.ಸಂಬಂಧಿಕರು ಸಾವನ್ನಪ್ಪಿದಾಗ ರಜೆ ಬೇಕಾಗುತ್ತೆ. ಅಂತಹ ಸಂದರ್ಭದಲ್ಲಿ ಮಾನವೀಯತೆ ಮರೆತು ರಜೆ ಕೊಡದೇ ಸತಾಯಿಸಿ, ಶವದ ಫೋಟೋ ತಂದು ಕೊಡು ಎಂದು ಹೇಳಿದರೆ ಶವದ ಜೊತೆ ನಾವು ಹೇಗೆ ಫೋಟೋ ತೆಗೆದುಕೊಳ್ಳಲಿ ಎಂದು ಅಳಲು ತೋಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ದೂರು ಕೊಟ್ಟಿರುವ ಸಿಬ್ಬಂದಿ ತನ್ನ ಹೆಸರನ್ನು ಮಾತ್ರ ಉಲ್ಲೇಖಿಸಿಲ್ಲ.

ಅನಾರೋಗ್ಯದಿಂದ ಓಡಾಡಲು ಸಾಧ್ಯವಾಗದ ಸಮಯದಲ್ಲಿ ದೂರವಾಣಿ ಮುಖಾಂತರ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದರೆ ನಿವೇ ಖುದ್ದಾಗಿ ರಜೆ ಅರ್ಜಿ ನೀಡಿದರೆ ರಜೆ ಮಂಜೂರು ಮಾಡುತ್ತೇನೆ ಇಲ್ಲವಾದರೆ ಗೈರು ಹಾಜರು ಮಾಡುತ್ತೇನೆ ಮತ್ತು ಬೇರೆ ಘಟಕಕ್ಕೆ ವರ್ಗವಣೆ ಮಾಡುವುದಾಗಿ ಬೆದರಿಕೆ ಹಾಕುವುದು. ಈ ರೀತಿ ಪ್ರಕರಣಗಳು ಅಧಿಕವಾಗಿ ನಡೆಯುತ್ತಿರುತ್ತವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos