ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟ ಶರಣ್

ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟ ಶರಣ್

ಬೆಂಗಳೂರು: ಸ್ಯಾಂಡಲ್ ವುಡ್ ಅಧ್ಯಕ್ಷರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇವರು ಏಕಾಯಕಿ ಚಿತ್ರರಂಗಕ್ಕೆ ಬಂದ ತಕ್ಷಣವೇ ಅಧ್ಯಕ್ಷರಾದವರಲ್ಲ ತುಂಬಾ ವರ್ಷಗಳಿಂದ ತುಂಬಾ ಶ್ರಮಿಸಿದ್ದಾರೆ. ತಮ್ಮ ಪ್ರತಿಭೆಯನ್ನು ವರಕ್ಕೆ ಹಚ್ಚಲು ಕಷ್ಟ ಪಟ್ಟಿದ್ದಾರೆ, ಮುಂದುವರೆದು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಅಧ್ಯಕ್ಷ ಅಂದ್ರೆ ನಮ್ಮೆಲ್ಲ ನೆಚ್ಚಿನ ನಟ ಶರಣ್‌  ಹುಟ್ಟು ಹಬ್ಬದ ಸಂಭ್ರಮ.

ಸ್ಯಾಂಡಲ್ವುಡ್ ನಟ ಶರಣ್ ಇಂದು ಐವತ್ತೆ ಎರಡನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟ ಶರಣ್ ಕಾಮಿಡಿ ಕಲಾವಿದನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, 1996ರಲ್ಲಿ ತೆರೆಕಂಡ ಮಹೇಂದರ್ ನಿರ್ದೇಶನದ ಕರ್ಪೂರದ ಗೊಂಬೆ ಎಂಬ ರೋಮ್ಯಾಂಟಿಕ್ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು.

ನಂತರ ಹಲವಾರು ವರ್ಷ ಕಾಮಿಡಿ ಕಲಾವಿದರಾಗಿ ಮಿಂಚಿದ್ದರು ರಾಂಬೊ, ಅಧ್ಯಕ್ಷ, ಬುಲೆಟ್ ಬಸ್ಯಾ, ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ಕಾಮಿಡಿ ರೋಲ್ ಗೆ ಗುಡ್ ಬೈ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos