ಶರಣ್ ಜೋಡಿಯಾಗಿ ರಾಗಿಣಿ!

ಶರಣ್ ಜೋಡಿಯಾಗಿ ರಾಗಿಣಿ!

ಬೆಂಗಳೂರು, ಅ. 3 : ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿರೋ ರಾಗಿಣಿ ಇಗ ಶರಣ್ಗೆ ಜೋಡಿಯಾಗಿ ವಿಭಿನ್ನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.
ವೀರಮದಕರಿ ಚಿತ್ರದಲ್ಲಿ ಕಿಚ್ಚ ಸುದೀಪ್ ಜೋಡಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ರಾಗಿಣಿ ಸಾಕಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಥರ ಥರದ ಪಾತ್ರಗಳಲ್ಲಿ ಮಿಂಚಿದ್ದಾರೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ಟಿ ಜಿ ವಿಶ್ವಪ್ರಸಾದ್ ನಿರ್ಮಾಣ ಮಾಡಿರೋ ಯೋಗಾನಂದ್ ನಿರ್ದೇಶನ ಮಾಡಿದ್ದಾರೆ. ಇದರಲ್ಲಿನ ನಾಯಕಿ ಪಾತ್ರ ರಾಗಿಣಿ ಬಿಟ್ಟರೆ ಬೇರೆ ಯಾರೂ ನಿರ್ವಹಿಸೋದು ಕಷ್ಟ ಎಂಬ ಬಗ್ಗೆ ನಿರ್ದೇಶಕರು ಮತ್ತು ಚಿತ್ರತಂಡ ಆರಂಭದಲ್ಲಿಯೇ ಫಿಕ್ಸಾಗಿತ್ತಂತೆ.

ಫ್ರೆಶ್ ನ್ಯೂಸ್

Latest Posts

Featured Videos