ಸ್ಯಾಂಡಲ್ ವುಡ್ ನ ಮೂವರ ಹುಟ್ಟುಹಬ್ಬ

ಸ್ಯಾಂಡಲ್ ವುಡ್ ನ ಮೂವರ ಹುಟ್ಟುಹಬ್ಬ

ಬೆಂಗಳೂರು, ಸೆ. 18 : ಸ್ಯಾಂಡಲ್ವುಡ್ನಲ್ಲಿಂದು 3 ಜನ ದಿಗ್ಗಜರ ಹುಟ್ಟುಹಬ್ಬದ ಸಂಭ್ರಮ. ಸಾಹಸಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ, ನಟಿ ಶೃತಿ ಹುಟ್ಟುಹಬ್ಬದ ಆಚರಣೆ ಅಭಿಮಾನಿಗಳು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಅವರ 69ನೇ ಜಯಂತೋತ್ಸವ. ವಿಷ್ಣುದಾದ ಹುಟ್ಟುಹಬ್ಬ 2 ಕಡೆ ಆಚರಿಸಲಾಗುತ್ತಿದೆ. ವಿಷ್ಣುವರ್ಧನ್ ನಿವಾಸದಲ್ಲಿ ಭಾರತಿ ವಿಷ್ಣುವರ್ಧನ್ ಮತ್ತು ಕುಟುಂಬ ಸದಸ್ಯರು ಹುಟ್ಟುಹಬ್ಬ ಆಚರಿಸಿದರೆ, ಅಭಿಮಾನಿಗಳು ಸ್ಟುಡಿಯೋದಲ್ಲಿ ದಾದಗೆ ನಮಿಸಲಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ 52ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅಭಿಮಾನಿಗಳು ಹಾಗೂ ಸಿನಿಮಾ ತಾರೆಯರು ಉಪ್ಪಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಶೃತಿ ಅವರು 44ನೇ ವಸಂತಕ್ಕೆ ಕಾಲಿಡ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos