ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪತ್ನಿ ಬಂಧನ..!

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪತ್ನಿ ಬಂಧನ..!

ಏ. 29, ನ್ಯೂಸ್ ಎಕ್ಸ್ ಪ್ರೆಸ್:  ಸಾಹಸ್​ಪುರ ಅಲಿ ನಗರದಲ್ಲಿರುವ ಮೊಹಮ್ಮದ್​ ಶಮಿ ಮನೆಗೆ ನಿನ್ನೆ ಮಧ್ಯರಾತ್ರಿ ಹಸಿನ್ ಜಹಾನ್​ ಹೋಗಿ ಗಲಾಟೆ ಮಾಡಿದ್ದಾರೆ. ಆಗ ಆಕೆಯ ಅತ್ತೆ ಅಲ್ಲಿಂದ ಹೋಗುವಂತೆ ಗದರಿದಾಗ ಅತ್ತೆ-ಸೊಸೆ ನಡುವೆ ವಾಗ್ವಾದ ನಡೆದಿದೆ. ಬಳಿಕ, ಮಗುವನ್ನು ಕರೆದುಕೊಂಡು ರೂಮಿನೊಳಗೆ ಹೋಗಿ ಬಾಗಿಲು ಹಾಕಿಕೊಂಡ ಹಸಿನ್​ ಬಹಳ ಹೊತ್ತಾದರೂ ಬಾಗಿಲು ತೆರೆಯಲಿಲ್ಲ. ಈಗಾಗಲೇ ತಮ್ಮ ಮೇಲೆ ವರದಕ್ಷಿಣೆ ಕಿರುಕುಳದ ಕೇಸು ದಾಖಲಿಸಿರುವುದರಿಂದ ಗಾಬರಿಗೊಂಡ ಮೊಹಮ್ಮದ್​ ಶಮಿ ಮನೆಯವರು ಈ ಕುರಿತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅವರ ಮಾತಿಗೂ ಹಸಿನ್ ಒಪ್ಪದ ಕಾರಣಕ್ಕೆ ಆಕೆಯನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ, ಮಧ್ಯರಾತ್ರಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಹಸಿನ್ ಜಹಾನ್, ನಾನು ನನ್ನ ಗಂಡನ ಮನೆಗೆ ಹೋಗಿದ್ದೆ. ಅಲ್ಲಿ ಇರಲು ನನಗೆ ಸಂಪೂರ್ಣ ಹಕ್ಕಿದೆ. ನನ್ನ ಅತ್ತೆಯ ಮನೆಯವರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿ ಮನೆಯಿಂದ ಹೊರಹಾಕಲು ನೋಡಿದ್ದರಿಂದ ರೂಮಿನಲ್ಲಿ ಬಾಗಿಲು ಹಾಕಿಕೊಂಡೆ. ಅತ್ತೆಯ ಮನೆಯವರಿಗೆ ಪೊಲೀಸರು ಕೂಡ ಬೆಂಬಲ ನೀಡುತ್ತಿದ್ದಾರೆ. ನನ್ನ ಅತ್ತೆ ಹಾಗೂ ಅವರ ಮನೆಯವರನ್ನು ಬಂಧಿಸಲು ಬದಲು ನನ್ನನ್ನೇ ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯಕ್ಕೆ ಐಪಿಎಲ್​ನಲ್ಲಿ ಬ್ಯುಸಿಯಾಗಿರುವ ಮೊಹಮ್ಮದ್​ ಶಮಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಪ್ರಮುಖ ಆಟಗಾರ. 2019ರ ವಿಶ್ವಕಪ್​ ತಂಡದಲ್ಲಿ ಕೂಡ ಮೊಹಮ್ಮದ್​ ಶಮಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಳೆದ ವರ್ಷ ಮಾರ್ಚ್​ನಲ್ಲಿ ತನ್ನ ಗಂಡ ಮೊಹಮ್ಮದ್​ ಶಮಿ ವಿರುದ್ಧ ಹಸಿನ್ ಜಹಾನ್ ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ ಮತ್ತು ಅಕ್ರಮ ಸಂಬಂಧದ ಆರೋಪ ಮಾಡಿದ್ದರು. ಮೊಹಮ್ಮದ್ ಶಮಿ ಹಲವು ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ನಾನು ಅವರೇನು ಬಯಸಿದ್ದರೋ ಅದೆಲ್ಲವನ್ನೂ ಮಾಡಿದೆ. ಆದರೆ, ನನ್ನ ಗಂಡ ಒಂದು ದಿನವೂ ನನ್ನನ್ನು ಹೆಂಡತಿಯಂತೆ ನಡೆಸಿಕೊಳ್ಳಲಿಲ್ಲ. ಆದರೆ, ನನ್ನ ಕೊನೆಯ ಉಸಿರು ಇರುವವರೆಗೂ ಅವರಿಗೆ ವಿಚ್ಛೇದನ ನೀಡುವುದಿಲ್ಲ ಎಂದು ಆರೋಪಿಸಿದ್ದ ಹಸಿನ್ ಜಹಾನ್ ಅವರ ಆರೋಪವನ್ನು ಮೊಹಮ್ಮದ್ ಶಮಿ ತಳ್ಳಿಹಾಕಿದ್ದರು.  ನನ್ನ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳು, ನನ್ನ ತೇಜೋವಧೆ ಮಾಡಲು ಮತ್ತು ನನ್ನ ವೃತ್ತಿ ಜೀವನಕ್ಕೆ ಧಕ್ಕೆ ಉಂಟು ಮಾಡಲು ಮಾಡಲಾಗುತ್ತಿರುವ ಪ್ರಯತ್ನಗಳು  ಎಂದು ಸ್ಪಷ್ಟನೆ ನೀಡಿದ್ದರು. ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ರನ್ನು ಉತ್ತರ ಪ್ರದೇಶದ ಪೋಲಿಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ. ಈ ಹಿಂದೆ ಶಮಿ ಪತ್ನಿ ವರದಕ್ಷಿಣೆ ಕಿರುಕುಳ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಶಮಿ ಪತ್ನಿ ಹಸಿನ್ ಶಮಿ ಮೇಲೆ ದಾಖಲಿಸಿದ್ರು.

ಫ್ರೆಶ್ ನ್ಯೂಸ್

Latest Posts

Featured Videos