ಶಮಿ ದಾಖಲೆ ಮುರಿದ ಬುಮ್ರಾ

ಶಮಿ ದಾಖಲೆ ಮುರಿದ ಬುಮ್ರಾ

ಲಂಡನ್, ಜು.6: ವೇಗಿ ಜಸ್ಪ್ರೀತ್ ಬುಮ್ರಾ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಶಮಿ ದಾಖಲೆ ಸರಿಗಟ್ಟಿದ್ದಾರೆ. ಕರುಣಾರತ್ನೆ ವಿಕೆಟ್ ಪಡೆಯುವ ಮೂಲಕ ಬುಮ್ರಾ ಟೀಂ ಇಂಡಿಯಾ ಪರ ವೇಗವಾಗಿ 100 ವಿಕೆಟ್ ಪಡೆದ ಶಮಿ ಜೊತೆ ಗುರುತಿಸಿಕೊಂಡರು. ಪಂದ್ಯದಲ್ಲಿ ಸತತ 9 ಡಾಟ್ ಬಾಲ್ಗಳನ್ನು ಬೌಲ್ ಮಾಡಿದ ಬುಮ್ರಾ ಇನ್ನಿಂಗ್ಸ್ನ 4ನೇ ಓವರಿನಲ್ಲಿ ಕರುಣಾರತ್ನೆ ಧೋನಿ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಪಂದ್ಯದಲ್ಲಿ ಕುಶಾಲ್ ಪೆರೆರಾ ವಿಕೆಟ್ ಪಡೆದ ಬುಮ್ರಾ ಶ್ರೀಲಂಕಾ ತಂಡಕ್ಕೆ ಡಬಲ್ ಅಘಾತ ನೀಡಿದರು.
56 ಪಂದ್ಯಗಳಲ್ಲಿ 100 ವಿಕೆಟ್ ಸಾಧನೆ ಮಾಡಿರುವ ಬುಮ್ರಾ ಭಾರತ ಪರ ವೇಗವಾಗಿ ಈ ಸಾಧನೆ ಮಾಡಿದ 2ನೇ ಬೌಲರ್ ಎನಿಸಿಕೊಂಡರು. ಈ ಹಿಂದೆ ಮೊಹಮ್ಮದ್ ಶಮಿ ಕೂಡ 56 ಪಂದ್ಯಗಳಲ್ಲಿ 100 ವಿಕೆಟ್ ಪಡೆದಿದ್ದರು. ಉಳಿದಂತೆ ಪಟ್ಟಿಯಲ್ಲಿ 65 ಪಂದ್ಯಗಳಿಂದ ಜಹೀರ್ ಖಾನ್, 67 ಪಂದ್ಯಗಳಿಂದ ಅಜಿತ್ ಅಗರ್ಕರ್, 98 ಪಂದ್ಯಗಳಿಂದ ಶ್ರೀನಾಥ್ ಹಾಗೂ 59 ಪಂದ್ಯಗಳಿಂದ ಇರ್ಫಾನ್ ಪಠಾಣ್ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos