ಶಕ್ತಿಸೌಧದ ಸುತ್ತ ಮುತ್ತ ಪೊಲೀಸ್ ಬಿಗಿ ಭದ್ರತೆ

ಶಕ್ತಿಸೌಧದ ಸುತ್ತ ಮುತ್ತ ಪೊಲೀಸ್ ಬಿಗಿ ಭದ್ರತೆ

ಬೆಂಗಳೂರು, ಜು. 11: ಇಂದಿನ ಮಟ್ಟಿಗೆ ರಾಜ್ಯದ ಶಕ್ತಿಸೌಧವಾದ ವಿಧಾನಸೌಧ ಜೈಲಿನಂತೆ ಭಾಸವಾಗುತ್ತಿತ್ತು. ಹೀಗೊಂದು ಅನುಭವಕ್ಕೆ ಕಾರಣವಾದದ್ದು ಅಸ್ಥಿರ ಮೈತ್ರಿ ಸರ್ಕಾರದ ಅರಾಜಕ ನೀತಿ.

ಕಳೆದ ಒಂದು ತಿಂಗಳಿನಿಂದ ಮೈತ್ರಿ ಸರ್ಕಾರ ಅಸ್ಥಿರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅಲ್ಲದೆ, ಕಳೆದ ಶನಿವಾರ 13 ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿದ ನಂತರ ರಾಜ್ಯ ರಾಜಕೀಯ ಚಿತ್ರಣವೇ ಅದಲು-ಬದಲಾಗಿದೆ. ನೆನ್ನೆಯಂತೂ ಶಾಸಕ ಡಾ.ಸುಧಾಕರ್ ರಾಜೀನಾಮೆಯಿಂದಾಗಿ ಇಡೀ ಸ್ಪೀಕರ್ ಕಚೇರಿ ರಣರಂಗವಾಗಿತ್ತು.

ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ ಶಾಸಕರು ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ಸಂಜೆ ಸ್ಪೀಕರ್ ಅವರನ್ನು ಖುದ್ದಾಗಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲಿದ್ದಾರೆ. ಹೀಗಾಗಿ ಇಡೀ ವಿಧಾನಸೌಧದಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ. ಇದು ಸಾಮಾನ್ಯ ಪ್ರಕ್ರಿಯೆಯೂ ಹೌದು. ಆದರೆ, ಇಂದು ಅದನ್ನೂ ಮೀರಿ ವಿಧಾನಸೌಧವನ್ನು ಜೈಲಿನಂತೆ ಮಾರ್ಪಡಿಸಲಾಗಿತ್ತು.

ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ರಾಜಕೀಯ ಚಟುವಟಿಕೆಗಳು ನಡೆಯುತ್ತಿರುವ ಹಿನ್ನೆಲೆ ಇಂದು ವಿಧಾನಸೌಧದ ಎಲ್ಲಾ ಗೇಟ್ಗಳಲ್ಲೂ ಪೊಲೀಸರ ಕಣ್ಗಾವಲು, ಬಿಗಿ ಭದ್ರತೆ ಮಾಡಲಾಗಿತ್ತು. ಜನ ಸಾಮಾನ್ಯರಿಗೆ ಒಳಗೆ ಅನುಮತಿ ಇರಲಿಲ್ಲ. ಇನ್ನೂ ಮಾಧ್ಯಮದವರಿಗೂ ಸಹ ಸಚಿವರ ಕೊಠಡಿಗಳಿಗೆ ಅನುಮತಿ ನಿರಾಕರಿಸಲಾಗಿತ್ತು.

 

ಫ್ರೆಶ್ ನ್ಯೂಸ್

Latest Posts

Featured Videos