ಶಾಸಕಾಂಗ ಪಕ್ಷದ ನಾಯಕನ್ನಾಗಿ ಜಗನ್ ಮೋಹನ್ ರೆಡ್ಡಿ ಆಯ್ಕೆ

ಶಾಸಕಾಂಗ ಪಕ್ಷದ ನಾಯಕನ್ನಾಗಿ ಜಗನ್ ಮೋಹನ್ ರೆಡ್ಡಿ ಆಯ್ಕೆ

ಹೈದರಾಬಾದ್‌ , ಮೇ. 25, ನ್ಯೂಸ್ಎಕ್ಸ್ ಪ್ರೆಸ್:  ಆಂಧ್ರಪ್ರದೇಶದಲ್ಲಿ ಭರ್ಜರಿ ಜಯಭೇರಿ ಬಾರಿಸಿದ ವೈಎಸ್‌ಆರ್‌ ಕಾಂಗ್ರೆಸ್‌ನ ಮುಖ್ಯಸ್ಥ ಜಗನ್‌ ಮೋಹನ್‌ ರೆಡ್ಡಿ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.  ಅಮರಾವತಿಯಲ್ಲಿ ನಡೆದ ನೂತನ ಶಾಸಕರೊಂದಿಗಿನ ಪಕ್ಷದ ಶಾಸಕಾಂಗ ಸಭೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಜಗನ್‌ ಮೋಹನ್‌ ರೆಡ್ಡಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೇಳೆ ಮಾತನಾಡಿದ ರೆಡ್ಡಿ, ‘2019’ರಲ್ಲಿ ಜನರು ನಮ್ಮ ಮೇಲೆ ವಿಶ್ವಾಸ ಮತ್ತು ನಂಬಿಕೆಯನ್ನಿಟ್ಟು ಮತ ನೀಡಿದ್ದಾರೆ. ನಮ್ಮ ಕಾರ್ಯಕ್ಷಮತೆಯನ್ನು ನೋಡಿ 2024ಕ್ಕೂ ಜನರು ಇಂತದ್ದೇ ದೊಡ್ಡ ತೀರ್ಪನ್ನು ನೀಡಬೇಕು. ಒಂದು ವರ್ಷದೊಳಗೆ ಮುಖ್ಯಮಂತ್ರಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸಲು ನಿಮ್ಮೆಲ್ಲರ ಸಹಕಾರ ಬೇಕು ಎಂದು ಕೇಳಿದರು.

ಇದೇ ಬೆನ್ನಲ್ಲೇ ಜಗನ್ ಮೋಹನ್‌ ರೆಡ್ಡಿ ಅವರು ನೂತನ ಸರ್ಕಾರ ರಚನೆಗೆ ಅನುಮತಿ ನೀಡುವಂತೆ ಕೋರಿ ರಾಜ್ಯಪಾಲ ಇ.ವಿ.ಎಲ್‌. ನರಸಿಂಹನ್‌ ಅವರನ್ನು ಇಂದೇ ಮನವಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೇ 30ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ಹೇಳಿದೆ.

ಫ್ರೆಶ್ ನ್ಯೂಸ್

Latest Posts

Featured Videos