‘ಜವಾನ್’ ಚಿತ್ರದ ಯಶಸ್ಸಿನ ಬೆನ್ನಲೆ ನಟ ಶಾರುಖ್ ಖಾನ್ ಗೆ ಕೊಲೆ ಬೆದರಿಕೆ!

‘ಜವಾನ್’ ಚಿತ್ರದ ಯಶಸ್ಸಿನ ಬೆನ್ನಲೆ ನಟ ಶಾರುಖ್ ಖಾನ್ ಗೆ ಕೊಲೆ ಬೆದರಿಕೆ!

ಬೆಂಗಲೂರು: ಬಾಲಿವುಡ್ ನಲ್ಲಿ ಅತ್ಯಂತ ದೊಡ್ಡ ನಟನಾಗಿ ಗುರಿತಿಸಿಕೊಂಡಂತಹ ಶಾರುಖ್ ಖಾನ್ ಬಾಲಿವುಡ್ ನಲ್ಲಿ ಟಾಫ್ ನಟನಾಗಿದ್ದಾರೆ. ಹಾಗೆ ಇವರಿಗೆ ಇಡೀ ದೇಶದ್ಯಾಂತ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ.
ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ‘ಪಠಾಣ್’ ಮತ್ತು ‘ಜವಾನ್’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಜವಾನ್ ಇದಾಗಲೇ 1100 ಕೋಟಿ ರೂಪಾಯಿ ಅಧಿಕ ಬಾಚಿಕೊಂಡಿದೆ. ಇಲ್ಲಿಯವರೆಗಿನ ಬಾಲಿವುಡ್ನ ಹಲವು ದಾಖಲೆಗಳನ್ನು ಉಡೀಸ್ ಮಾಡಿ ಜವಾನ್ ಮುನ್ನುಗ್ಗುತ್ತಲೇ ಸಾಗಿದೆ. ಪಠಾಣ್ ಚಿತ್ರವೇ ಅತಿದೊಡ್ಡ ಬ್ಲಾಕ್ಬಸ್ಟರ್ ಎಂದು ಸಾಬೀತಾಗಿತ್ತು. ಅದರೆ ಅದನ್ನು ಮೀರಿ ಜವಾನ್ ಮುನ್ನುಗ್ಗುತ್ತಿದೆ. ಆದರೆ ಅದರ ಬೆನ್ನಲ್ಲೇ ಶಾಕಿಂಗ್ ಸುದ್ದಿಯೊಂದು ಹೊರಬಂದಿದೆ. ಅದೇನೆಂದರೆ ಶಾರುಖ್ ಖಾನ್ ಅವರಿಗೆ ಕೊಲೆ ಬೆದರಿಕೆಗಳು ಬರುತ್ತಿವೆಯಂತೆ. ಪಠಾಣ್ ಮತ್ತು ಜವಾನ್ ಚಿತ್ರದ ಯಶಸ್ಸಿನ ಬಳಿಕ ತಮಗೆ ಕೊಲೆ ಬೆದರಿಕೆ ಬರುವುದು ಹೆಚ್ಚಾಗಿದೆ ಎಂದು ಶಾರುಖ್ ನಟ ದೂರು ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು (ಮಹಾರಾಷ್ಟ್ರ ಸರ್ಕಾರ) ಅವರಿಗೆ ವೈ+ ಭದ್ರತೆಯನ್ನು ಒದಗಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos