ಶಬರಿಮಲೆ ಅಭಿವೃದ್ಧಿಗೆ 739 ಕೋಟಿ ರೂ. ವಿಶೇಷ ಯೋಜನೆ ಪ್ರಕಟಿಸಿದ ಕೇರಳ ಸರಕಾರ

ಶಬರಿಮಲೆ ಅಭಿವೃದ್ಧಿಗೆ 739 ಕೋಟಿ ರೂ. ವಿಶೇಷ ಯೋಜನೆ ಪ್ರಕಟಿಸಿದ ಕೇರಳ ಸರಕಾರ

ತಿರುವನಂತಪುರಂ: ಶಬರಿಮಲೆ ಅಭಿವೃದ್ಧಿಗೆ ಕೇರಳ ಸರಕಾರ ವಿಶೇಷ ಯೋಜನೆಯನ್ನು ಬಜೆಟ್‍ನಲ್ಲಿ ಪ್ರಕಟಿಸಿದೆ. ಶಬರಿಮಲೆ ದೇಗುಲವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಹೊಸ ವ್ಯವಸ್ಥೆಯನ್ನು ಸರಕಾರ ಮಾಡಲಿದೆ.

ಪಂಪೆಯಲ್ಲಿ 10 ಲಕ್ಷ ಸಂಗ್ರಹ ಸಾಮರ್ಥ್ಯದ ಸೀವೇಜ್ ಟ್ರೀಟ್‍ಮೆಂಟ್ ಪ್ಲಾಂಟ್( ಚರಂಡಿ ಸಂಸ್ಕರಣ ಘಟಕ) ಸ್ಥಾಪನೆಯಾಗಲಿದೆ.

ಸೀವೇಜ್‍ಪ್ಲಾಂಟ್, ಹರಡು ಚಪ್ಪರ, ಎರುಮೇಲಿ ಮತ್ತು ನಿಲಕ್ಕಲ್‍ನಲ್ಲಿ ಪಾರ್ಕಿಂಗ್‍ಗಾಗಿ 147.75 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಶಬರಿಮಲೆಯ ರಸ್ತೆಗಳಿಗೆ 200 ಕೋಟಿ ರೂಪಾಯಿ ಸಹಿತ ಶಬರಿಮಲೆ ಅಭಿವೃದ್ಧಿಗೆ ಒಟ್ಟು 739 ಕೋಟಿ ರೂಪಾಯಿ ಬಜೆಟ್‍ನಲ್ಲಿ ಇರಿಸಲಾಗಿದೆ.

ತಿರುವಿದಾಂಕೂರ್ ದೇವಸ್ವಂ ಬೋರ್ಡಿಗೆ 100 ಕೋಟಿ ರೂಪಾಯಿಯ ವಿಶೇಷ ನಿಧಿ ನೀಡಲಾಗುವುದು. ಕೊಚ್ಚಿ, ಮಲಬಾರ್ ದೇವಸ್ವಂಬೋರ್ಡಿಗೆ 35 ಕೋಟಿ ರೂಪಾಯಿ ನೀಡಲಾಗುವುದು ಎಂದು ವಿತ್ತ ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos