ಶಬರಿಮಲೆ ದೇಗುಲ ಪ್ರವೇಶಿಸಿದ್ದ ಇಬ್ಬರು ಮಹಿಳೆರಿಗೆ ಜೀವ ಬೆದರಿಗೆ: ಸುಪ್ರೀಂ ಮೊರೆ

ಶಬರಿಮಲೆ ದೇಗುಲ ಪ್ರವೇಶಿಸಿದ್ದ  ಇಬ್ಬರು ಮಹಿಳೆರಿಗೆ ಜೀವ ಬೆದರಿಗೆ: ಸುಪ್ರೀಂ ಮೊರೆ

ನವದೆಹಲಿ: ಶಬರಿಮಲೆ ಅಯ್ಯಪ್ಪ ದೇಗುವ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ್ದ
ಇಬ್ಬರು ಮಹಿಳೆಯರು ನಮಗೆ ಜೀವಬೆದರಿಕೆ ಇದೆ, ರಕ್ಷಣೆ ನೀಡಿ ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ಕನಕದುರ್ಗ(39)
ಹಾಗೂ ಕೇಳದ ಕಣ್ಣೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಬಿಂದು ಸುಪ್ರೀಂಗೆ ಮೊರೆ ಹೋಗಿದ್ದಾರೆ. ರಕ್ಷಣೆ
ನೀಡಿ ಎಂದು ಮನವಿ ಮಾಡಿದ್ದಾರೆ. ಕನಕದುರ್ಗ ಅವರ ಮೇಲೆ ಅವರ ಅತ್ತೆಯೇ ಹಲ್ಲೆ ನಡೆಸಿದ್ದು, ಇದೀಗ ಆಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆಯುತ್ತಿದ್ದಾರೆ.

50 ವರ್ಷದೊಳಗಿನ ಮಹಿಳೆಯರಿಗೆ ದೇಗುಲ
ಪ್ರವೇಶಕ್ಕೆ ನಿರ್ಬಂಧ ಹೇರಿದ್ದರೂ ಕನಕ ದುರ್ಗಾ ಅವರು 40 ವರ್ಷದ ಬಿಂದು ಅಮ್ಮಿನಿ ಎಂಬ ಮಹಿಳೆ ಜತೆ
ಶಬರಿಮಲೆ ದೇಗುಲ ಪ್ರವೇಶಿಸಿದ್ದರು. ದೇಗುಲ ಪ್ರವೇಶಿದ ಇಬ್ಬರೂ ಮಹಿಳೆಯರಿಗೆ 24 ಗಂಟೆ ಪೊಲೀಸ್​ ಭದ್ರತೆ
ನೀಡುವಂತೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಶುಕ್ರವಾರ ಸುಪ್ರೀಂ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ
ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ತಿಳಿಸಿದ್ದಾರೆ.

ಜ.2ರ ತಡರಾತ್ರಿ ಕನಕದುರ್ಗಾ ಮತ್ತು ಬಿಂದು ಪೊಲೀಸ್​ ಬಿಗಿ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ್ದರು.
ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರೂ ಪ್ರವೇಶ ಪಡೆಯಬಹುದು ಎಂದು ಸುಪ್ರೀಂ ತೀರ್ಪು ನೀಡಿದ್ದರೂ
ಭಕ್ತರು ಸುಪ್ರೀಂ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ್ದರು. ಸುಪ್ರೀಂ ಅನುಮತಿ ನೀಡಿದ್ದರೂ ಬಿಜೆಪಿ,
ಸಂಘಪರಿವಾರ ಹಾಗೂ ಕಾಂಗ್ರೆಸ್‍ ಶಬರಿ ಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿದ್ದವು.

ಫ್ರೆಶ್ ನ್ಯೂಸ್

Latest Posts

Featured Videos