‘ಶಾದಿ ಭಾಗ್ಯ’ ಯೋಜನೆ ದೋಸ್ತಿ ಸರಕಾರ ಕೈಬಿಟ್ಟಿದೆ..?

‘ಶಾದಿ ಭಾಗ್ಯ’ ಯೋಜನೆ ದೋಸ್ತಿ ಸರಕಾರ ಕೈಬಿಟ್ಟಿದೆ..?

ಬೆಳಗಾವಿ, ಮೇ. 4, ನ್ಯೂಸ್ ಎಕ್ಸ್ ಪ್ರೆಸ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದದಲ್ಲಿ ಜಾರಿಗೆ ತಂದಿದ್ದ ಶಾದಿ ಭಾಗ್ಯ ಯೋಜನೆಯನ್ನು ದೋಸ್ತಿ ಸರಕಾರ ಕೈಬಿಟ್ಟಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿರುವ ಆರ್.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ ಅವರು ಶಾದಿ ಭಾಗ್ಯ ಯೋಜನೆ ಅಡಿಯಲ್ಲಿ ಮದುವೆಯಾದ ಸುಮಾರು 28,540 ಅರ್ಹ ಫಲಾನುಭವಿಗಳಿಗೆ ಇನ್ನೂ ಧನ ಸಹಾಯ ಸಿಕ್ಕಿಲ್ಲ. ಇದಲ್ಲದೇ ಈ ಯೋಜನೆಯನ್ನು ನಂಬಿ ಹಲವು ಜನರು ಸಹಾಯ ಹಣಕ್ಕಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಿ ಮದುವೆ ಮಾಡಿದ್ದರು. ಆದರೆ ಆ ಕುಟುಂಬಗಳಿಗೆ ಇಲ್ಲಿ ತನಕ ಸರಿಯಾಗಿ ಹಣದ ವಿತರಣೆಯಾಗಿಲ್ಲ ಅಂತ ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ ಅವರು ಮಾತನಾಡಿ ಯೋಜನೆಯ 142 ಕೋಟಿ ರೂ. ಹಣವನ್ನು ಸಮ್ಮಿಶ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ ಅಂತ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos