ಈ ಟ್ಯೂಷನ್ ಕ್ಲಾಸ್ ನಲ್ಲಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಕಾಮುಕ ಶಿಕ್ಷಕ ಬಂಧನ

ಈ ಟ್ಯೂಷನ್ ಕ್ಲಾಸ್ ನಲ್ಲಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಕಾಮುಕ ಶಿಕ್ಷಕ ಬಂಧನ

ಬೆಂಗಳೂರು: ಟ್ಯೂಷನ್ ಮಾಸ್ಟರ್ ನಿಂದ ವಿದ್ಯಾರ್ಥಿ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಟ್ಯೂಷನ್ ಮಾಸ್ಟರ್ ಮುನೀರ್ ಸಾಬ್ ನನ್ನು ಬಂಧಿಸಲಾಗಿದೆ.

 

ಈತನ ಬಳಿ ಕಳೆದ ಆರು ತಿಂಗಳಿಂದ ಟ್ಯೂಷನ್ ಗೆ ಬರುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗೆ ಮೊಬೈಲ್ ನಲ್ಲಿ ಆಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ಚಟುವಟಿಕೆ ಬಗ್ಗೆ ಮಾತನಾಡಿ, ವಿದ್ಯಾರ್ಥಿ ಮೇಲೆ ದೌರ್ಜನ್ಯ ನಡೆಸಿದ್ದಾನೆ ಎಂದು ದೂರಲಾಗಿದೆ.

 

ಅಷ್ಟೇ ಅಲ್ಲದೆ ತನ್ನ ಹೀನ ಕೃತ್ಯವನ್ನ ವಿಡಿಯೋ ಮಾಡಿರುವ ಈತ ಇದನ್ನಿಟ್ಟುಕೊಂಡು ವಿದ್ಯಾರ್ಥಿಗೆ ಬ್ಲಾಕ್ ಮೇಲ್ ಮಾಡಿದ್ದಾನೆ ಎನ್ನಲಾಗ್ತಿದೆ.

 

ಈ ಸಂಬಂಧ ವಿದ್ಯಾರ್ಥಿ ಪೋಷಕರು ನೀಡಿದ ದೂರಿನನ್ವಯ ಕಾಮುಕ ಟ್ಯೂಷನ್ ಮಾಸ್ಟರ್ ನನ್ನು ಅಶೋಕ್ ನಗರ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos