ಚರಂಡಿಗಳು ಸ್ವಚ್ಛತೆ ಇಲ್ಲದೇ ಗಬ್ಬು ನಾರುತ್ತಿರುವುದು

ಚರಂಡಿಗಳು ಸ್ವಚ್ಛತೆ ಇಲ್ಲದೇ ಗಬ್ಬು ನಾರುತ್ತಿರುವುದು

ದೇವನಹಳ್ಳಿ, ನ. 05: ಸರ್ಕಾರ ಸ್ವಚ್ಛತೆಗೆ ಕೋಟ್ಯಾಂತರ ರೂ ಖರ್ಚಿ ಮಾಡುತ್ತಿದ್ದರೂ ಸಹ ತಾಲೂಕಿನ ಹೊಸ ನಲ್ಲೂರು ಗ್ರಾಮದ ಚರಂಡಿಯಲ್ಲಿ ಕಸ ಕಡ್ಡಿ ತುಂಬಿಕೋಡು ಗಬ್ಬು ನಾರುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದಾರೆ.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ವಚ್ಛತೆ ಬಗ್ಗೆ ಗ್ರಾಮ ಪಂಚಾಯಿತಿಗಳಲ್ಲಿ ಅರಿವು ಮೂಡಿಸುತ್ತಿದ್ದು, ಸ್ವಚ್ಛತೆಗೆ ಮೊದಲು ಆಧ್ಯತೆ ನೀಡುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಸ್ವಚ್ಛತೆ ಕಾಣದಂತಾಗಿದೆ. ಹೊಸ ನಲ್ಲೂರು ಗ್ರಾಮದಲ್ಲಿ ಚರಂಡಿಯಲ್ಲಿ ನೀರು ನಿಂತು ಕಸ ಕಡ್ಡಿ ತುಂಬಿ ಕೊಂಡು ಗಬ್ಬು ನಾರುತ್ತಿದೆ. ಮಳೆಗಾಲವಾಗಿರುವುದರಿಂದ ಚರಂಡಿಯಲ್ಲಿ ನೀರು ಮುಂದೆ ಸಾಗದೇ ನೀರು ನಿಂತು ಸೊಳ್ಳೆಗಳ ತಾಣವಾಗಿದೆ. ಸಂಜೆಯ ವೇಳೆಯಂತೂ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳು ಬರುವ ಭೀತಿಯಲ್ಲಿ ಜನರು ಇದ್ದಾರೆ. ಗ್ರಾಪಂ ನವರು ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ಹೇಳುತ್ತಾರೆ.

ಯಾವುದೇ ಗ್ರಾಮದಲ್ಲಿ ಸ್ವಚ್ಛತೆ ಇಲ್ಲವಾದರೆ ಆ ಗ್ರಾಮಗಳು ಆರೋಗ್ಯವಂತ ವಾಗಿರಲು ಅಸಾಧ್ಯ. ಗಾಂಧ ಜಯಂತಿ ಮತ್ತು ಇನ್ನಿತರೆ ದಿನಗಳಲ್ಲಿ ಜನ ಪ್ರತಿನಿಧಿಗಳು ಮಾಸ್ಕ್ ಹಾಕಿಕೊಂಡು ಪೊರಕೆ ಹಿಡಿದು ಸ್ವಚ್ಚ ಮಾಡಲು ಬರುವರು. ಕೇವಲ ಹೆಸರಿಗೆ ಮಾತ್ರ ಸ್ವಚ್ಛ ಭಾರತವಾದರೆ ಯಾವುದೇ ಗ್ರಾಮಗಳು ಸ್ಚಚ್ಛವಾಗಿರಲೂ ಸಾಧ್ಯವಿಲ್ಲ. ಇಂತಹ ಗಬ್ಬು ನಾರುತ್ತಿರುವ ಚರಂಡಿಗಳನ್ನು ಸ್ಚಚ್ಚಗೊಳಿಸಬೇಕು.

ಚರಂಡಿಗಳು ಸ್ವಚ್ಛತೆ ಇಲ್ಲದೆ ಸೊಳ್ಳೆಗಳ ತಾಣವಾಗಿದೆ. ತ್ಯಾಜ್ಯ ವಸ್ತುಗಳು ಶೇಕರಣೆ ಆಗಿ ಸೊಳ್ಳೆಗಳು ಉತ್ಪತ್ತಿ ಆಗುವುದು. ಸ್ಥಳೀಯರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಆವರಿಸಿದೆ. ಗ್ರಾಪಂನವರುಅದನ್ನು ಸ್ವಚ್ಛತೆ ಗೊಳಿಸದೆ ಹಾಗೆಯೇ ಬಿಟ್ಟಿದ್ದಾರೆ. ಗ್ರಾಮದಲ್ಲಿ 6 ತಿಂಗಳಿಗೊಂದು ಸಾರಿ ಗ್ರಾಮಗಳ ಚರಂಡಿಗಳು ಸ್ವಚ್ಛತೆ ಮಾಡಿದರೆ ಗ್ರಾಮವೂ ಶುಚಿಯಾಗಿರುತ್ತದೆ. ಈ ಚರಂಡಿಯಲ್ಲಿ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿ ನೀರು ನಿಲ್ಲುವಂತೆ ಮಾಡಿರುವುದ್ದು ಎದ್ದುಕಾಣುತ್ತಿದೆ. ಸೊಳ್ಳೇಗಳ ತಾಣವಾಗಿ ಈ ಗಾಗಲೇ ಡೆಂಗ್ಯೂಇನ್ನೂ ಮುಂತಾದಜ್ವರದ ಕಾಯಿಲೆಗಳು ಜನರಿಗೆಕಾಣಿಸುತ್ತಿವೆ. ಇನ್ನಾ ದರೂಚರಂಡಿಕಾಮಗಾರಿಯನ್ನು ಪ್ರಾರಂಭಿಸಿ ನೀರು ನಿಲ್ಲದಂತೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

 

ಫ್ರೆಶ್ ನ್ಯೂಸ್

Latest Posts

Featured Videos