ಚರಂಡಿಯಲ್ಲಿ ಹೂಳು, ತೀರದ ಗೋಳು

ಚರಂಡಿಯಲ್ಲಿ ಹೂಳು, ತೀರದ ಗೋಳು

ಚೇಳೂರು, ಡಿ. 24: ಕೆಲವು ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ನಾನು ನಿಮ್ಮ ಊರಿಗೆ ಅದು ಮಾಡುತ್ತೇನೆ ಮಾಡುತ್ತೇನೆ ಇದು ಎಂದು ದೊಡ್ಡದಾಗಿ ಭಾಷಣಗಳನ್ನು ಮಾಡುತ್ತಾರೆ ಆದರೆ ಚುನಾವಣೆ ಮುಗಿದ ನಂತರ ಯಾರು ಹಳ್ಳಿ ಕಡೆ ತಿರುಗಿ ನೋಡದ ಪರಿಸ್ಥಿತಿ ಇಂದಿನ ಕಾಲದಲ್ಲಿ ನಡೆಯುತ್ತಿದೆ.

ತಾಲ್ಲೂಕಿನ ಷೇರ್ ಖಾನ್ ಕೋಟೆ ಗ್ರಾಮದಲ್ಲಿ ಮನೆಗಳ ಮುಂದೆ ನಿರ್ಮಿಸಿರುವ ಚರಂಡಿ ಹಾಗೂ ಮುಖ್ಯರಸ್ತೆ ಚರಂಡಿಯಲ್ಲಿ ಕಸ ಕಡ್ಡಿ, ಪ್ಲಾಸ್ಟಿಕ್‌ ತ್ಯಾಜ್ಯ ತುಂಬಿ ಸ್ವಚ್ಛತೆ ಮರೆಯಾಗಿದೆ.

ಚರಂಡಿಯಲ್ಲಿ ಸರಾಗವಾಗಿ ನೀರು ಹರಿಯದೆ ಮಡುಗಟ್ಟಿ ನಿಂತಿದೆ. ಪಾಚಿಕಟ್ಟಿ ನಿಂತು ಗಬ್ಬು ಬೀರುತ್ತಿದೆ. ಮನೆಗಳಿಂದ ಬಂದ ಕೊಳಚೆ ನೀರು ಚರಂಡಿಗಳಲ್ಲಿ ಸಂಗ್ರಹವಾಗಿ ಸೊಳ್ಳೆಗಳ ಕಾಟ ಮಿತಿಮೀರಿದೆ ಇದರಿಂದ ಸುತ್ತಮುತ್ತಿಲಿನ ನಿವಾಸಿಗಳಿಗೆ ಎಲ್ಲಿಲ್ಲದ ಮಾರಕ ಕಾಯಿಲೆಗಳು ಬರುತ್ತಿವೆ. ಚರಂಡಿಗಳು ಹಾಳಾಗಿವೆ ಇದರ ಜೊತೆಗೆ ಇದರಲ್ಲಿ ಗಿಡಗಂಟೆಗಳು ಬೆಳೆದು ಚರಂಡಿ ಮುಚ್ಚಿ ಹೋಗಿವೆ. ಕೆಲವು ಬಡಾವಣೆಗೆಗಳಿಗೆ ಹೋದರೆ, ಕೊಳೆಗೇರಿಗೆ ಹೋದಂತ ಅನುಭವವಾಗುತ್ತದೆ.

ಆಸ್ಪತ್ರೆಯಲ್ಲೂ ಚಿಕಿತ್ಸೆ ಇಲ್ಲ

ಗ್ರಾಮದಲ್ಲಿ ನೂರಾರು ಜನರಿದ್ದಾರೆ. ಹೆಚ್ಚಾಗಿ ಪರಿಶಿಷ್ಟ ಪಂಗಡ, ಒಕ್ಕಲಿಗರು ಹಾಗೂ ಹಿಂದುಳಿದವರೇ ಹೆಚ್ಚಾಗಿ ವಾಸುತ್ತಿದ್ದಾರೆ. ಕೂಲಿಯೇ ಇವರ ಜೀವನಾಧಾರ. ಅನಾರೋಗ್ಯಕ್ಕೆ ತುತ್ತಾದ ವೇಳೆಯಲ್ಲಿ ಚಿಕಿತ್ಸೆ ಪಡೆಯಲು ಕೂಡ ಕಷ್ಟವನ್ನು ಅನುಭವಿಸ ಬೇಕಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಇಷ್ಟೆಲ್ಲ ಸಮಸ್ಯೆ ಇದ್ದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನಾದರೂ ಚರಂಡಿ ಹೂಳು ತೆಗೆಯಲು ಮುಂದಾಗಬೇಕು ಎನ್ನುತ್ತಾರೆ ಸ್ಥಳೀಯರಾದ ಅಮರ್.

ಫ್ರೆಶ್ ನ್ಯೂಸ್

Latest Posts

Featured Videos