ಜಿ20 ಶೃಂಗಸಭೆಯಲ್ಲಿ ಹಲವಾರು ಗಣ್ಯರು ಭಾಗಿ

ಜಿ20 ಶೃಂಗಸಭೆಯಲ್ಲಿ ಹಲವಾರು ಗಣ್ಯರು ಭಾಗಿ

ನಮ್ಮ ಭಾರತದಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ಜಿ20 ಶೃಂಗ ಸಭೆಯಲ್ಲಿ ಹಲವಾರು ಗಣ್ಯಾತಿ ಗಣ್ಯರು ಭಾಗಿಯಾಗಿರುತ್ತಾರೆ. ಜಿ20 ಶೃಂಗಸಭೆ ಇದು ನಮ್ಮ ಭಾರತದ ಹೆಮ್ಮೆ ಇದು ದೆಹಲಿಯ ಪ್ರಗತಿ ಮೈದಾನ ಭಾರತ್ ಮಂಟಪದಲ್ಲಿ ಜಿ20 ಶೃಂಗಸಭೆ ನಡೆಯಲಿದೆ.
ಜಿ20 ಶೃಂಗಸಭೆಯ ಎರಡು ದಿನಗಳ ಕಾರ್ಯಕ್ರಮ ಇಂದಿನಿಂದ ಆರಂಭವಾಗಿದೆ. ಮೊದಲ ದಿನ ಕಾರ್ಯಕ್ರಮಗಳನ್ನು ಎರಡು ಅವಧಿಗಳಾಗಿ ವಿಂಗಡಿಸಲಾಗಿದೆ. ಜಿ 20 ಸಮ್ಮೇಳನಕ್ಕಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಗುಂಪಿನ ಇತರ ನಾಯಕರು ಮತ್ತು ಇತರ ಹಲವು ದೇಶಗಳ ಪ್ರತಿನಿಧಿಗಳು ದೆಹಲಿಗೆ ತಲುಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾರತ ಮಂಟಪದಲ್ಲಿ ಜಾಗತಿಕ ನಾಯಕರನ್ನು ಭೇಟಿ ಮಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತ್ ಮಂಟಪಕ್ಕೆ ಆಗಮಿಸಿದ ಜಾಗತಿಕ ನಾಯಕರನ್ನು ಸ್ವಾಗತಿಸಿದರು. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಮುಖ್ಯಸ್ಥ, ಹಣಕಾಸು ಸ್ಥಿರತೆ ಮಂಡಳಿ ಅಧ್ಯಕ್ಷ, ಐಎಲ್ಒ ಮಹಾನಿರ್ದೇಶಕರು, ಐಎಂಎಫ್ ಅಧ್ಯಕ್ಷರು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ, ಡಬ್ಲ್ಯುಎಚ್ಒ ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಆಸ್ಟ್ರೇಲಿಯಾದ ಮಾಜಿ ಎಫ್ಎಂ ಆಸ್ಟ್ರೇಲಿಯಾ, ಡಬ್ಲ್ಯುಟಿಒ ಮಹಾನಿರ್ದೇಶಕ ನಾಗೋಜಿ ಒಕೊಂಜಿ ಜಿ 20 ಶೃಂಗಸಭೆಗೆ ಆಗಮಿಸಿದ್ದಾರೆ.
ವಿಶ್ವದ 20 ಶಕ್ತಿಶಾಲಿ ರಾಷ್ಟ್ರಗಳ ಗುಂಪಾದ ಜಿ 20 ಗೆ ಭಾರತ ಆತಿಥ್ಯ ವಹಿಸುತ್ತಿದೆ. ಎರಡು ದಿನಗಳ ಜಿ 20 ಶೃಂಗಸಭೆ ಇಂದು ಪ್ರಾರಂಭವಾಗಿದೆ. ಎರಡು ದಿನಗಳ ಜಿ 20 ಸಮ್ಮೇಳನದ ಮೊದಲ ಅಧಿವೇಶನವು ‘ಒಂದು ಭೂಮಿ’ ವಿಷಯವನ್ನು ಆಧರಿಸಿದೆ. ಜಿ 20 ಶೃಂಗಸಭೆಯ ಎರಡನೇ ಅಧಿವೇಶನವು ‘ಒಂದು ಕುಟುಂಬ’ ಎಂಬ ವಿಷಯವನ್ನು ಆಧರಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos