ಟೊಮೆಟೊ ಸೇವನೆಯ ಹಲವಾರು ಪ್ರಯೋಜನೆಗಳು!

ಟೊಮೆಟೊ ಸೇವನೆಯ ಹಲವಾರು ಪ್ರಯೋಜನೆಗಳು!

ಬೆಂಗಳೂರು: ಪ್ರತಿ ಅಡುಗೆ ಮನೆಯಲ್ಲಿ ಇದ್ದೆ ಇರುವ ಒಂದು ಹಣ್ಣು ಮತ್ತು ತರಕಾರಿ ಅಂದ್ರೆ ಅದುವೇ ನಮ್ಮೆಲ್ಲರ ಅಚ್ಚುಮೆಚ್ಚಿನ ಟೊಮೆಟೊ. ಈ ಟೊಮೊಟೊ ತನ್ನದೇ ಆದ ರುಚಿಯಿಂದ ಪಾಕಶಾಲೆಯಲ್ಲಿ ವಿಶಿಷ್ಟವಾದ ಹೆಸರು ಮಾಡಿದೆ ಎನ್ನಬಹುದು. ಈ ಟೊಮೆಟೊ ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಕಾರಣ ಇದು ನಮ್ಮ ದೇಹದ ಮೇಲೆ ಅನೇಕ ಪರಿಣಾಮಗಳನ್ನು ಬೀರುತ್ತದೆ.

ಹೃದಯದ ಗೆಳೆಯ

ಹೃದಯದ ಆರೋಗ್ಯ ಕಾಪಾಡುವಲ್ಲೂ ಟೊಮೆಟೊ ಸಹಕಾರಿ. ಇದರ ಲೈಕೊಪೇನ್‌, ವಿಟಮಿನ್‌ ಸಿ ಮತ್ತು ಪೊಟಾಶಿಯಂ ಸತ್ವಗಳು ರಕ್ತದೊತ್ತಡ ನಿಯಂತ್ರಿಸಿ, ರಕ್ತನಾಳಗಳು ಸಂಕೋಚಗೊಳ್ಳದಂತೆ ಕಾಪಾಡಿ, ಕೊಲೆಸ್ಟ್ರಾಲ್‌ ಕಡಿತ ಮಾಡುವಲ್ಲೂ ನೆರವಾಗುತ್ತವೆ. ಹಾಗಾಗಿ ಆಹಾರದಲ್ಲಿ ಟೊಮೆಟೊ ಬಳಕೆಯನ್ನು ಧಾರಾಳವಾಗಿ ಮಾಡಬಹುದು.

ಚರ್ಮಕ್ಕೆ ಕಳೆ

ಇದರಲ್ಲಿರುವ ವಿಟಮಿನ್‌ ಸಿ ಮತ್ತು ವಿಟಮಿನ್‌ ಎ ಸತ್ವಗಳು ಚರ್ಮದ ಕಾಂತಿ ಹೆಚ್ಚಿಸಲು ಪೂರಕವಾಗಿ ಕೆಲಸ ಮಾಡುವಂಥವು. ಈ ಜೀವಸತ್ವಗಳ ಜೊತೆಗೆ ಲೈಕೊಪೇನ್‌ ಸೇರಿದರೆ, ಕೊಲಾಜಿನ್‌ ಉತ್ಪತ್ತಿ ಮಾಡುವಲ್ಲಿ ದೇಹಕ್ಕೆ ದೊಡ್ಡ ನೆರವು ದೊರೆತಂತೆ. ಇದರಿಂದ ಚರ್ಮದ ಸುಕ್ಕುಗಳು ಮಾಯವಾಗಿ ಕಾಂತಿ ಹೆಚ್ಚಿಸಲು ಸಾಧ್ಯವಿದೆ.

ತೂಕ ಇಳಿಕೆಗೆ ಪೂರಕ

ಇದರಲ್ಲಿ ಕ್ಯಾಲರಿ ಕಡಿಮೆ, ನೀರು ಮತ್ತು ಸತ್ವ ಹೆಚ್ಚು. ಇದರ ಜೊತೆಗೆ ನಾರೂ ಸಾಕಷ್ಟಿದೆ. ಹಾಗಾಗಿ ತೂಕ ಹೆಚ್ಚುವ ಭೀತಿ ಇಲ್ಲದೆಯೇ ಟೊಮೆಟೊ ಮೆಲ್ಲಬಹುದು. ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿಸಿಟ್ಟು, ಹಸಿವಿನ ಕೂಗನ್ನು ನಿಯಂತ್ರಿಸುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos