ಮೇಲೆದ್ದ ಗೂಳಿ..! ಸೆನ್ಸೆಕ್ಸ್​ ನಲ್ಲಿ ಭಾರೀ ಏರಿಕೆ

ಮೇಲೆದ್ದ ಗೂಳಿ..! ಸೆನ್ಸೆಕ್ಸ್​ ನಲ್ಲಿ ಭಾರೀ ಏರಿಕೆ

ಮುಂಬೈ, ಮೇ.21, ನ್ಯೂಸ್‍ ಎಕ್ಸ್ ಪ್ರೆಸ್‍:  ಲೋಕಸಭಾ ಚುನಾವಣಾ ಮತಎಣಿಕೆಗೆ 2 ದಿನ ಬಾಕಿ ಇದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್​ಡಿಎಗೆ ಬಹುಮತ ಬಂದಿದೆ. ಚುನಾವಣೋತ್ತರ ಫಲಿತಾಂಶ ದೇಶೀಯ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಚುನಾವಣೋತ್ತರ ಫಲಿತಾಂಶ ಪ್ರಕಟವಾಟ ಮರುದಿನ ಆರಂಭವಾದ ಬಿಎಸ್​ಇ ವಹಿವಾಟಿನಲ್ಲಿ ಸೆನ್ಸೆಕ್ಸ್​ 1000ಕ್ಕೂ ಹೆಚ್ಚು ಅಂಶ ಏರಿಕೆ ಕಂಡಿದೆ.

‘ಲೋಕಾ’ ರಿಸಲ್ಟ್‍ ವರೆಗೂ ಯತಾಸ್ಥಿತಿ?  

ಎಸ್​ ಮತ್ತು ಪಿ ಬಿಎಸ್​ಇ ಸೆನ್ಸೆಕ್ಸ್​ 1,041.98 ಅಂಶ ಏರಿಕೆಯಾಗುವ ಮೂಲಕ 38,972.75 ಅಂಶ ತಲುಪಿದೆ. ಮತ್ತು ಎನ್​ಎಸ್​ಇ ನಿಫ್ಟಿ 11,713.90ಕ್ಕೆ ಏರಿಕೆಯಾಗುವ ಮೂಲಕ 306.75 ಅಂಶ ತಲುಪಿ ದಿನದ ವಹಿವಾಟು ಅಂತ್ಯಗೊಳಿಸಿತು. ಚುನಾವಣೆ ಫಲಿತಾಂಶದವರೆಗೂ ಮಾರುಕಟ್ಟೆ ಇದೇ ಸ್ಥಿತಿ ಕಾಯ್ದುಕೊಳ್ಳಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಮಾರುತಿ, ಎಲ್​ ಆ್ಯಂಡ್​ ಟಿ, ಎಸ್​ಬಿಐ, ಐಸಿಐಸಿಐ ಬ್ಯಾಂಕ್, ಆರ್​ಐಎಲ್​, ಎಂ ಆ್ಯಂಡ್​ ಎಂ, ಇಂಡಸ್​ ಇಂಡ್​ ಬ್ಯಾಂಕ್, ಆಕ್ಸಿಸ್​ ಬ್ಯಾಂಕ್, ಯೆಸ್​ ಬ್ಯಾಂಕ್ ಮತ್ತು ವೇದಾಂತ ಸೇರಿದಂತೆ ಹಲವು ಕಂಪನಿಗಳ ಷೇರುಗಳಲ್ಲಿ ಶೇ.4ರಷ್ಟು ಏರಿಕೆ ಆಗಿದೆ. ಮತ್ತೊಂದೆಡೆ ಬಜಾಜ್​ ಆಟೊ, ಇನ್ಫೋಸಿಸ್​ ಮತ್ತು ಸಿಎಲ್​ ಟೆಕ್​ ಷೇರುಗಳು ಶೇ.2ರಷ್ಟು ಏರಿಕೆ ಕಂಡಿವೆ.

 

 

 

 

ಫ್ರೆಶ್ ನ್ಯೂಸ್

Latest Posts

Featured Videos