ಹಿರಿಯ ನಟಿ ಎಸ್. ಕೆ. ಪದ್ಮಾದೇವಿ ಇನ್ನಿಲ್ಲ

ಹಿರಿಯ ನಟಿ ಎಸ್. ಕೆ. ಪದ್ಮಾದೇವಿ ಇನ್ನಿಲ್ಲ

ಬೆಂಗಳೂರು, ಸೆ. 19: ಕನ್ನಡದ ಹಿರಿಯ ನಟಿ 1934ರಲ್ಲಿ ಕನ್ನಡದಲ್ಲಿ ಸೆಟ್ಟೇರಿದ ಮೊದಲ ವಾಕ್ಚಿತ್ರ `ಭಕ್ತಧ್ರುವ’ದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದ ಎಸ್. ಕೆ. ಪದ್ಮಾದೇವಿ (95)  ಅವರು ಇಂದು ವಿಧಿವಶರಾಗಿದ್ದಾರೆ.

ಪದ್ಮಾದೇವಿ ಹುಟ್ಟಿದ್ದು ಬೆಂಗಳೂರಿನಲ್ಲಿ. ಬಳ್ಳಾರಿ ರಾಘವಾಚಾರ್ಯರ ಮೂಲಕ ರಂಗಭೂಮಿ ಪ್ರವೇಶಿಸಿದ್ದರು.

1936ಲ್ಲಿ ತೆರೆಕಂಡ ‘ಸಂಸಾರನೌಕ’ ಅವರಿಗೆ ಹೆಸರು ತಂದು ಕೊಟ್ಟ ಚಿತ್ರ. ಈ ಚಿತ್ರದಲ್ಲಿ 4 ಹಾಡುಗಳನ್ನು ಹಾಡಿದರು. ಒಂದು ಹಾಡನ್ನು ಸ್ವತಃ ಇವರೇ ವೀಣೆ ನುಡಿಸಿಕೊಂಡು ಹಾಡಿದ್ದು ವಿಶೇಷವಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos