ಸೇನೆಯ ಮಾಜಿ ಮುಖ್ಯಸ್ಥರ ಪತ್ರ ನಕಲಿ: ನಿರ್ಮಲಾ ಸೀತಾರಾಮನ್

ಸೇನೆಯ ಮಾಜಿ ಮುಖ್ಯಸ್ಥರ ಪತ್ರ ನಕಲಿ: ನಿರ್ಮಲಾ ಸೀತಾರಾಮನ್

ನವದೆಹಲಿ, ಏ. 12, ನ್ಯೂಸ್ ಎಕ್ಸ್ ಪ್ರೆಸ್:  ರಾಜಕೀಯ ಪಕ್ಷಗಳು ಸೇನೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಸೇನೆಯ ಮಾಜಿ ಮುಖ್ಯಸ್ಥರು ರಾಷ್ಟ್ರಪತಿಗೆ ಯಾವುದೇ ಪತ್ರಬರೆದಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿ, ನಿವೃತ್ತ ಯೋಧರೂ ಯಾವುದೇ ಪತ್ರವನ್ನು ಬರೆದಿಲ್ಲ, ಯಾವ ಪತ್ರವೂ ರಾಷ್ಟ್ರಪತಿ ಭವನ ತಲುಪಿಲ್ಲ್ಲ ಸ್ವತಃ ರಾಷ್ಟ್ರಪತಿ ಭವನವೇ ಈ ಕುರಿತು ಸ್ಪಷ್ಟನೆ ನೀಡಿದೆ ಎಂದು ಹೇಳಿದರು.

ಇಬ್ಬರು ಹಿರಿಯ ಅಧಿಕಾರಿಗಳು ತಾವು ಯಾವುದೇ ಪತ್ರಕ್ಕೆ ಸಹಿ ಹಾಕಿಲ್ಲ ಅದು ನಕಲಿ ಪತ್ರ ಎನ್ನುವ ಮಾಹಿತಿ ನೀಡಿದ್ದಾರೆ. ಒಟ್ಟು 150 ಜನ ನಿವೃತ್ತ ಯೋಧರು ಸಹಿ ಮಾಡಿದ್ದಾರೆ ಎನ್ನಲಾದ ಪತ್ರ ಮಾಧ್ಯಮಗಳಲ್ಲಿ ಹರಿದಾಡಿತ್ತು. ಭಾರತೀಯ ಸೇನೆಗೆ ‘ಮೋದಿ ಸೇನೆ’ ಎಂದು ಹೇಳಿಕೆ ವಿಚಾರ ಪ್ರಸ್ತಾಪಿಸಿರುವ ಅವರು ಸೇನೆಯ ಹೆಸರನ್ನು ರಾಜಕೀಯ ಪಕ್ಷಗಳು ಪ್ರಸ್ತಾಪಿಸದಂತೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos