ಸೀಬೆಕಾಯಿ ಜ್ಯೂಸ್

ಸೀಬೆಕಾಯಿ ಜ್ಯೂಸ್

ಬೆಂಗಳೂರು,ನ. 23 : ಸೀಬೆಕಾಯಿ ಅಥವಾ ಪೇರಳೆ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎಲ್ಲರಿಗೂ ಚಿರಪರಿಚಿತ. ಕಡಿಮೆ ಬೆಲೆಗೆ ಸಿಗುವ ಈ ಹಣ್ಣಿನಲ್ಲಿ ಆರೋಗ್ಯ ಕಾಪಾಡುವ ಅನೇಕ ಅಂಶಗಳಿವೆ. ಸೀಬೆಕಾಯಿ ಜ್ಯೂಸ್ ಕೂಡ ಆರೋಗ್ಯಕ್ಕೆ ಬಹಳ ಉಪಯೋಗಕಾರಿ. ಇದು ತಂಪಿನ ಜೊತೆ ಪೋಷಕಾಂಶಗಳನ್ನು ದೇಹಕ್ಕೆ ಪೂರೈಕೆ ಮಾಡುತ್ತದೆ. ಸೀಬೆ ಜ್ಯೂಸ್ ನಮ್ಮ ದೇಹದ ವಿಟಮಿನ್ ಸಿ ಕೊರತೆಯನ್ನು ಹೋಗಲಾಡಿಸುತ್ತದೆ. ಹೀಗಾಗಿ ಅಂಗಡಿಗಳಲ್ಲಿ ಜ್ಯೂಸ್ ಕೊಂಡು ಕುಡಿಯುವ ಬದಲಾಗಿ ಮನೆಯಲ್ಲಿಯೇ ಬೇಗನೇ ಜ್ಯೂಸ್ ತಯಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು:
ತೊಳೆದು ಸಿಪ್ಪೆ ಬಿಡಿಸಿ ಹೆಚ್ಚಿದ ಸೀಬೆ ಹಣ್ಣು – 1 ಕಪ್
ಸಕ್ಕರೆ- 1 ಟೀ ಚಮಚ
ತಣ್ಣನೆಯ ನೀರು – 1/2 ಕಪ್
ಪುದಿನ ಎಲೆಗಳು – 3
ಐಸ್ ಕ್ಯೂಬ್
ಮಾಡುವ ವಿಧಾನ:
* ಸೀಬೆಹಣ್ಣುಗಳ ಸಿಪ್ಪೆಯನ್ನು ತೆಗೆದು ಸಣ್ಣದಾಗಿ 1 ಕಪ್ ನಷ್ಟು ಕತ್ತರಿಸಿಕೊಳ್ಳಬೇಕು.
* ನಂತರ ಸೀಬೆ ಹಣ್ಣನ್ನು ಮಿಕ್ಸರ್ನಲ್ಲಿ ಮಿಕ್ಸಿ ಮಾಡಿ ತಣ್ಣನೆಯ ನೀರು ಮತ್ತು ಸಕ್ಕರೆಯನ್ನು ಹಾಕಬೇಕು. ಹಣ್ಣಿನ ಮಿಶ್ರಣ ನುಣುಪಾಗ ಬೇಕು.
* ಮಿಕ್ಸಿಯಾದ ಮೇಲೆ ಅದನ್ನು 1 ಕಪ್ನಲ್ಲಿ ಸೋಸಿ ಬೀಜಗಳನ್ನು ಹೊರತೆಗೆಯ ಬೇಕು.
* ಕೊನೆಗೆ ಜ್ಯೂಸ್ಗೆ ಐಸ್ ಕ್ಯೂಬ್ ಮತ್ತು ಪುದಿನ ಎಲೆಗಳನ್ನು ಸೇರಿಸಿದರೆ ರುಚಿ ರುಚಿಯಾದ ಸೀಬೆ ಹಣ್ಣಿನ ಜ್ಯೂಸ್ ಕುಡಿಯಲು ರೆಡಿ.

ಫ್ರೆಶ್ ನ್ಯೂಸ್

Latest Posts

Featured Videos