ಸಮುದ್ರ ತಳ ಭಾಗದಲ್ಲಿ ಧ್ವಜಾರೋಹಣ

ಸಮುದ್ರ ತಳ ಭಾಗದಲ್ಲಿ ಧ್ವಜಾರೋಹಣ

ಪಾಂಡಿಚೇರಿ, ಆ. 15 : ದೇಶ ಪ್ರೇಮ ಅಂದರೆ ಇದು. ಆ. 15 ಬಂದರೆ ಶಾಲಾ, ಕಾಲೇಜು, ಕಚೇರಿಯಲ್ಲಿ, ಕಟ್ಟಡ ಸೇರಿದಂತೆ ವಿವಿದೆಡೆ ಭಾರತೀಯರು ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಾರೆ. ಪಾಂಡಿಚೇರಿ ಡೈವಿಂಗ್ ಸ್ಕೂಲ್ನ ತರಬೇತುದಾರ ಎಸ್.ಬಿ.ಅರವಿಂದ ವಿಶೇಷ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ.
ಪಾಂಡಿಚೇರಿ ಸಮುದ್ರದ ತಳಭಾಗಕ್ಕೆ ಇಳಿದ ಅರವಿಂದ್ 60 ಅಡಿ ಆಳದಲ್ಲಿ ಭಾರತದ ತ್ವಿವರ್ಣ ಧ್ವಜ ಇಟ್ಟು ಸಲ್ಯೂಟ್ ಹೊಡೆದಿದ್ದಾರೆ. 73ನೇ ಸ್ವಾತಂತ್ರ್ಯವಿಶೇಷ. ಆ. 15 ರಂದು ಪಾಂಡಿಚೇರಿ ಸಮುದ್ರದ ತಳಭಾಗದಲ್ಲಿ ಧ್ವಜಾರೋಹಣ ಡೈವ್ ಮೂಲಕ ಸಮುದ್ರಕ್ಕೆ ಹಾರಿದ್ದಾರೆ. ಬಳಿಕ 60 ಅಡಿ ತಳಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಿ ದೇಶದ ಗಮನಸೆಳೆದಿದ್ದಾರೆ. ನಮ್ಮ ದೇಶದ ಸಮುದ್ರ ಹಾಗೂ ನೀರು ಎಷ್ಟು ಕಲುಷಿತ. ಅನ್ನೋದನ್ನು ತೋರಿಸಲು 60 ಅಡಿ ತಳಭಾಗದಲ್ಲಿ ಧ್ವಜಾರೋಹಣ ಮಾಡಿದ್ದೇನೆ ಎಂದು ಅರವಿಂದ್ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos