ರಣಬಿಸಿಲಿಗೆ ಜನರು ತತ್ತರ!

ರಣಬಿಸಿಲಿಗೆ ಜನರು ತತ್ತರ!

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಶಾಖ ಏರತೊಡಗಿದೆ. ಹವಾಮಾನ ವೈಪರಿತ್ಯದಿಂದಾಗಿ ಈ ಬಾರಿ ವಾಡಿಕೆಯಿಂದ ಮುನ್ನವೇ ಬಿಸಿಲಿನ ಕಾವು ಹೆಚ್ಚಿದೆ. ತೇವಾಂಶ ಭರಿತ ಮೋಡಗಳ ಸೆಳೆತ ಇಲ್ಲದಿರುವುದು ವಾತಾವರಣದಲ್ಲಿ ತೀವ್ರ ತೇವಾಂಶ ಕೊರತೆಯಿಂದಾಗಿದೆ.

ಬಿಸಿಲಿನ ಝುಳವು ಜನರನ್ನು ಬಾಧಿಸುವಂತಾಗಿದೆ ಸಾಮಾನ್ಯವಾಗಿ ಬೇಸಿಗೆ ಮಾರ್ಚ್ ನಿಂದ ಆರಂಭವಾಗಿ ಮೇ ತಿಂಗಳವರೆಗೆ ಇರುತ್ತದೆ, ಆದರೆ ಈ ಬಾರಿ ವಾಡಿಕೆ ಗಿಂತ ಮುನ್ನವೇ ಶುರುವಾಗಿದೆ. ಈ ವರ್ಷ ನಾಲ್ಕು ತಿಂಗಳು ಬೇಸಿಗೆ ಕಾಲ ಇರಲಿದೆ ಸಾಮಾನ್ಯವಾಗಿ ಮಾರ್ಚ್ ಬಳಿಕ ಬಿಸಿಲು ಬೇಗ ಹೆಚ್ಚಾಗುತ್ತಿದ್ದು.

ಆದರೆ ಫೆಬ್ರವರಿನಲ್ಲಿಯೇ ಸುಡುಬಿಸಲು ಕಾಣಿಸಿಕೊಳ್ಳುತ್ತಿದ್ದು, ಏಪ್ರಿಲ್ ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ ನಲ್ಲಿ ಅಧಿಕವಾಗುವ ಸಾಧ್ಯತೆ ಇದೆ, ಈಗ ಪ್ರಸ್ತುತ ತಿಂಗಳಿನಲ್ಲಿ ಬಿಸಿಲು ತುಸು ಹೆಚ್ಚಳವಾಗಿರುವುದು ಆತಂಕ ಮೂಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos