ಶಾಲೆಯ ಮಕ್ಕಳಿಂದ ಸ್ವಚ್ಚಾ ಭಾರತ್ ಅಭಿಯಾನ

ಶಾಲೆಯ ಮಕ್ಕಳಿಂದ ಸ್ವಚ್ಚಾ ಭಾರತ್ ಅಭಿಯಾನ

ಚಂದಾಪುರ,ಆ.10: ಇಡೀ ದೇಶದಲ್ಲಿ ಯಾವುದೇ ಕ್ರಾಂತಿ ಹಾಗೂ ಹೊಸ ಬದಲಾವಣೆಯು ಆಗಬೇಕಾದರೆ ಮೊದಲು ಮಕ್ಕಳಲ್ಲಿ ಅರಿವು ಮತ್ತು ಜಾಗೃತಿ ಉಂಟಾಗಬೇಕು ಅನಂತರ ಅವರು ತಂದೆ ತಾಯಿ ನೆರೆಹೊರೆ ಹಾಗೂ ಇಡೀ ಜನಸಮೂಹಕ್ಕೆ ಕೊಂಡೋಯ್ಯುವ ಶಕ್ತಿ ಮಕ್ಕಳಲ್ಲಿ ಅಡಗಿದೆ ಆದುದ್ದರಿಂದ ಈ ಮಕ್ಕಳಿಂದ ಸಮಾಜದ ಕಣ್ಣು ತೆರೆಯಲು ಇಂತಹ ಸ್ವಚ್ಚಾ ಭಾರತ ಅಭಿಯಾನದ ಜಾಗೃತಿ ಜಾಥ ಅವಶ್ಯಕ ಎಂಬುದಾಗಿ ಶಾಲೆಯ ಪ್ರಾಂಶುಪಾಲರಾದ ಲಿಲ್ಲಿ ತಿಳಿಸಿದರು.

ಅವರು ಚಂದಾಪುರ ವೃತ್ತದಲ್ಲಿ ಹಳೇ ಚಂದಾಪುರದ ನೆಜರತ್ ಶಾಲೆಯ ಮಕ್ಕಳು ಮತ್ತು ಶಾಲೆಯ ಆಡಳಿತ ಮಂಡಳಿಯು ಏರ್ಪಡಿಸಿದ್ದ ಸ್ವಚ್ಚಾ ಭಾರತ್ ಅಭಿಯಾನ ಜಾಗೃತಿ ಜಾಥ ಹಾಗೂ ಬೀದಿ ನಾಟಕ, ಪ್ರದರ್ಶನ, ಜಾಗೃತ ಗೀತೆಗಳ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮಾಜ ಜಾಗೃತವಾಗಬೇಕು

ಸ್ವಚ್ಚತೆ ಎಂಬುದು ಸರ್ಕಾರ ಅಥವ ಪಂಚಾಯಿತಿ ಪುರಸಭೆಗಳು ಮಾಡುವುದು ಅಲ್ಲ ಸ್ವಚ್ಚತೆ ಎಂಬುದು ನಮ್ಮ ಮನೆಯಿಂದ ಆರಂಭವಾಗಬೇಕು ನಮ್ಮ ಮನೆಯಲ್ಲಿ ನಮ್ಮ ಮಕ್ಕಳಲ್ಲಿ ಹೇಗೆ  ಹಾಗೂ ಯಾವ ರೀತಿಯನ್ನು ಸ್ವಚ್ಚತೆಯನ್ನು ಕಾಪಾಡಬೇಕು ನಮ್ಮ ಮನೆಯಲ್ಲಿ ಉತ್ಪತಿಯಾಗುವ ಕಸವನ್ನು ನಾವುಗಳು ವೈಜ್ಞಾನಿಕವಾಗಿ ಹಸಿ ಕಸ, ಒಣಕಸ ಹಾಗೂ ಅಪಾಕಾರಿ ಕಸ ಎಂಬುದಾಗಿ ಮಿಂಗಡಿಸಿ ಕಸದ ಗಾಡಿಗೆ ಹಾಕ ಬೇಕು ಹೀಗೆ ಮಾಡುವುದರಿಂದ ಪುರಸಭೆ ಆಡಳಿತ ವ್ಯವಸ್ಥೆಗೆ ಬಹಳ ಸುಲಭವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಹಸಿಕಸವನ್ನು ಕಾಂಪೋಸ್ಟ ಗೊಬ್ಬರವನ್ನಾಗಿ ಮಾಡಿ ನಮ್ಮ ತೋಟಗಳಿಗೆ, ಹೊಲ ಗದ್ದೆಗಳು, ಹಾಗೂ ಬೆಳೆಸುವ ಸುತ್ತ ಮುತ್ತಲಿನ ಮರಗಿಡಗಳಿಗೆ ಹಾಕಿದರೆ ಉತ್ತಮವಾಗಿ ಬೆಳೆಯುತ್ತವೆ ಹಾಗೂ ಒಣಕಸವನ್ನು ಮರುಬಳಕೆಗೆ ಉಪಯೋಗಿಸಬಹುದು ಕಾಗದ, ರಟ್ಟು, ಪ್ಲಾಸ್ಟಿಕ್ ಬಾಟಲಿ ಇತ್ಯಾದಿಗಳನ್ನು ಕರಗಿಸಿ ಮತ್ತೆ ಪುನರ್ ಬಳಕೆ ಮಾಡಲು ಉಪಯೋಗಿಸಬಹುದು ಈ ರೀತಿಯಲ್ಲಿ ನಾವು ನಮ್ಮ ಕಸದಿಂದ ರಸಮಾಡುವ ವಿಧಾನವನ್ನು ಎಲ್ಲರಿಗೂ ಹೇಳಿಕೊಡಬೇಕು ಮತ್ತು ನಾವು ಮಾಡಿ ತೋರಿಸಬೇಕು ಇದಕ್ಕಾಗಿಯೇ ನಮ್ಮ ಶಾಲೆಯ ಮಕ್ಕಳು ಕೆಲವು ಪ್ರಾಯೋಗಿಕ ಪ್ರದರ್ಶನಗಳನ್ನು ಜನರ ಮುಂದೆ ಮಾಡಿ ತೋರಿಸಿದ್ದಾರೆ. ಇದು ನಮ್ಮ ಚಂದಾಪುರಕ್ಕೆ ಮಾತ್ರ ಸೀಮಿತವಾಗದೇ ನಮ್ಮ ಮಕ್ಕಳ ಶ್ರದ್ದೆ ಮತ್ತು ಉತ್ಸಹವನ್ನು ನೋಡಿ ನಮ್ಮ ಬೆಂಗಳೂರಿನ ವಿವಿಧ ಪ್ರದೇಶಗಳಿಗೂ ನಮ್ಮ ಜಾಗೃತಿ ನಾಟಕ ಮತ್ತು ಜಾಗೃತಿ ಗೀತೆಗಳ ಗಾಯನ ಮುಂದುವರೆಸಲಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos