ಕಿಚ್ಚನ ಚಿತ್ರ ಮೇಲೆ ನಡೆಯಿತು ಕತ್ತರಿ ಪ್ರಯೋಗ..!

ಕಿಚ್ಚನ ಚಿತ್ರ ಮೇಲೆ ನಡೆಯಿತು ಕತ್ತರಿ ಪ್ರಯೋಗ..!

ಬೆಂಗಳೂರು, ಡಿ. 24: ಸಿನಿಮಾಗಳು ಬಿಡುಗಡೆಯಾದ ನಂತರ ಮತ್ತೆ ಎಡಿಟ್ ಮಾಡಿ ಮರು ಬಿಡುಗಡೆ ಮಾಡಿರುವ ನಿದರ್ಶಗಳು ಸಾಕಷ್ಟಿವೆ. ಅಷ್ಟೇ ಏಕೆ ಬಿಡುಗಡಯಾದ ಸಿನಿಮಾವನ್ನು ನಿಲ್ಲಿಸಿ, ಮತ್ತೆ ಕೆಲ ದೃಶ್ಯಗಳ ಮರು ಚಿತ್ರೀಕರಣ ಮಾಡಿರುವ ಉದಾಹರಣೆಗಳೂ ಇವೆ. ಈಗಲೂ ಸಹ ಇದಕ್ಕೆ ಒಂದು ತಾಜಾ ಉದಾಹರಣೆಯಾಗಿದೆ ಕಿಚ್ಚ ಸುದೀಪ್ ಹಾಗೂ ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್ 3’.

ಕಿಚ್ಚ ಸುದೀಪ್ ಹಾಗೂ ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಸಿನಿಮಾ ಕನ್ನಡ, ಹಿಂದಿ ಹಾಗೂ ತೆಲುಗಿನಲ್ಲಿ ಕಳೆದ ಶುಕ್ರವಾರವಷ್ಟೇ ತೆರೆಗೆ ಅಪ್ಪಳಿಸಿದೆ. ಆದರೆ ಸಿನಿಮಾ ಬಿಡುಗಡೆಯಾದ ಮೂರನೇ ದಿನವೇ ಕತ್ತರಿ ಪ್ರಯೋಗ ನಡೆದಿದೆ.

ಇದೇ ಮೊದಲ ಬಾರಿಗೆ ಬಾಲಿವುಡ್ ಸುಲ್ತಾನ ಸಲ್ಮಾನ್ ಖಾನ್ ಹಾಗೂ ಸ್ಯಾಂಡಲ್ವುಡ್ ಪೈಲ್ವಾನ ಕಿಚ್ಚ ಸುದೀಪ್ ತೆರೆ ಹಂಚಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯಾದ ಮೊದಲನೇ ದಿನವೇ ನಿರೀಕ್ಷೆಗೆ ತಕ್ಕಂತೆ ಪ್ರತಿಕ್ರಿಯೆ ಸಿಗಲಿಲ್ಲ.

ಮೊದಲ ದಿನ 45 ಕೋಟಿಗೂ ಅಧಿಕ ಗಳಿಕೆ ನಿರೀಕ್ಷಿಸಿದ್ದವರಿಗೆ ಕೇವಲ 22 ಕೋಟಿ ರೂಪಾಯಿ, ಎರಡನೇ ದಿನ 23 ಕೋಟಿ ಹಾಗೂ ಮೂರನೇ ದಿನ 29 ಕೋಟಿ ರೂಪಾಯಿ ಗಳಿಕೆಯಾಗಿದೆ. 3 ದಿನಗಳಲ್ಲಿ ಒಟ್ಟು 74 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ‘ದಬಾಂಗ್ 3’ ಚಿತ್ರದ ಮೊದಲರ್ಧ ತುಂಬ ನಿಧಾನವಾಗಿ ಸಾಗುತ್ತದೆ ಅನ್ನೋ ಪ್ರತಿಕ್ರಿಯೆ ಬಂದಿದೆಯಂತೆ. ಈ  ಕಾರಣದಿಂದಲೇ ಚಿತ್ರತಂಡ ಸಿನಿಮಾವನ್ನು 9 ನಿಮಿಷಗಳಷ್ಟು ಟ್ರಿಮ್ ಮಾಡಿದೆ. ಕತ್ತರಿ ಪ್ರಯೋಗ ಮಾಡಿರುವ ಹೊಸ ವರ್ಷನ್ ಭಾನುವಾರದಿಂದಲೇ ಎಲ್ಲೆಡೆ ಪ್ರದರ್ಶನಗೊಳ್ಳುತ್ತಿದೆಯಂತೆ.

ಫ್ರೆಶ್ ನ್ಯೂಸ್

Latest Posts

Featured Videos