‘ಸೈರಾಟ್’ ರಿಂಕುಗೆ ಶೇ.82 ಅಂಕ

‘ಸೈರಾಟ್’ ರಿಂಕುಗೆ ಶೇ.82 ಅಂಕ

ಮುಂಬೈ,ಮೇ. 29, ನ್ಯೂಸ್‍ ಎಕ್ಸ್ ಪ್ರೆಸ್‍: 10ನೇ ತರಗತಿ ಪರೀಕ್ಷೆಯಲ್ಲಿ ಶೇ. 66 ಅಂಕ ಪಡೆದಿದ್ದ ಸೋಲಾಪುರ ಜಿಲ್ಲೆಯ ರಿಂಕು ಬಳಿಕ ಕಲಾ ವಿಭಾಗವನ್ನು ಆರಿಸಿಕೊಂಡು 82% ಅಂಕ ಪಡೆದಿದ್ದಾರೆ. 2016ರಲ್ಲಿ ಬಿಡುಗಡೆಗೊಂಡು ಭಾರಿ ಯಶಸ್ಸು ಗಳಿಸಿದ್ದ ಮರಾಠಿ ಚಿತ್ರ ‘ಸೈರಾಟ್’ ಯಾರಿಗೆ ಗೊತ್ತಿಲ್ಲ ಹೇಳಿ.

ಈ ಚಿತ್ರ ಬಾಲಿವುಡ್ ಸೇರಿದಂತೆ ಹಲವು ಭಾಷೆಗಳಿಗೆ ರಿಮೇಕ್ ಆಗಿತ್ತು. ಇದೀಗ ರಿಂಕು ಅವರ ಕುರಿತು ಮತ್ತೊಂದು ಸುದ್ದಿ ಬಂದಿದ್ದು, ಈ ಬಾರಿಯ ಹನ್ನೆರಡನೇ ತರಗತಿ ಪರೀಕ್ಷೆಯಲ್ಲಿ ಶೇ. 82 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಚಿತ್ರರಂಗದ ಜೊತೆಜೊತೆಗೆ ಶಿಕ್ಷಣವನ್ನೂ ಮುಂದುವರಿಸಿರುವ ರಿಂಕು, ಕಲಾ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos