ಖ್ಯಾತ ನಟ ‘ಸಯಾಜಿ ಶಿಂಧೆ’ ಆರೋಗ್ಯದಲ್ಲಿ ಏರುಪೇರು

ಖ್ಯಾತ ನಟ ‘ಸಯಾಜಿ ಶಿಂಧೆ’ ಆರೋಗ್ಯದಲ್ಲಿ ಏರುಪೇರು

ಬೆಂಗಳೂರು: ಖ್ಯಾತ ನಟ ಸಯಾಜಿ ಶಿಂಧೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿಲಾಗಿದೆ. ನಿನ್ನೆ ಎದೆನೋವು ಕಾಣಿಸಿಕೊಂಡಿದ್ದರಿಂದ ಕುಟುಂಬಸ್ಥರು ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವು ಪರೀಕ್ಷೆಗಳನ್ನ ನಡೆಸಿದ ವೈದ್ಯರು ನಟನ ಹೃದಯದಲ್ಲಿ ರಕ್ತನಾಳದ ಬ್ಲಾಕ್ ಆಗಿರುವುದನ್ನ ಕಂಡುಕೊಂಡಿದ್ದು, ತಕ್ಷಣವೇ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಸಧ್ಯ ಸಯಾಜಿ ಶಿಂಧೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸದ್ಯ ಅವರ ಆರೋಗ್ಯ ಸ್ಥಿತಿ ಚೆನ್ನಾಗಿದ್ದು ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಅಭಿಮಾನಿಗಳು ಸಯಾಜಿ ಶಿಂಧೆ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos