ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ

ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ

ಪೀಣ್ಯ ದಾಸರಹಳ್ಳಿ, ನ. 02: ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಕಾಲೇಜಿನಲ್ಲಿ 64ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕನ್ನಡ ವಿಭಾಗ ಹಾಗೂ ಕನ್ನಡ ಅಕಾಡೆಮಿ ಆಯೋಜಿಸಲಾಗಿತ್ತು. ಕಾರ್ಯಕ್ರಮವು ಕಲಾ ತಂಡ ಹಾಗೂ ತಮಟೆ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಧ್ವಜಾರೋಹಣ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವಿದ್ಯಾರ್ಥಿಗಳು ವಿವಿಧ ರೀತಿಯ ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ರಂಗದ ಮೇಲೆ ಪ್ರದರ್ಶಿಸಿದರು. ನಾಡು-ನುಡಿ ಸಂಸ್ಕೃತಿಯ ಪರಂಪರೆ ಹಿನ್ನೆಲೆಯ ಬೀದಿ ನಾಟಕಗಳನ್ನು ಪ್ರದರ್ಶಿಸಿದರು. ಕನ್ನಡ ನಾಡಿನ ವಿವಿಧ ಜಿಲ್ಲೆಗಳ ಉಡುಗೆ-ತೊಡುಗೆಗಳನ್ನು ಫ್ಯಾಶನ್ ಶೋ ಮೂಲಕ ಪ್ರದರ್ಶಿಸಿದರು.

ಉಪಪ್ರಾಂಶುಪಾಲ ರೆ. ಫಾದರ್ ಅಬ್ರಹಾಂ ಪಿ.ಜೆ.  ಮಾತನಾಡಿ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕನ್ನಡತನವನ್ನು ಮೈಗೂಡಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹಾಗೂ ನೆಲಜಲದ ಋಣವನ್ನು ತೀರಿಸುವುದೆಂದರೆ ಅದು ನಾವು ಕನ್ನಡ ಭಾಷೆಯನ್ನು ಆಡು ಭಾಷೆಯಾಗಿ ದಿನನಿತ್ಯದ ಬದುಕಿನೊಂದಿಗೆ ಅಳವಡಿಸಿಕೊಳ್ಳಬೇಕು. ಅನ್ಯ ಮಾತೃಭಾಷೆಯ ಜನರು ಇಂದು ಕನ್ನಡವನ್ನು ತಮ್ಮ ತಾಯಿ ಭಾಷೆಯನ್ನಾಗಿ ಸ್ವೀಕರಿಸಿ ಕನ್ನಡವನ್ನು ಉಳಿಸಿ-ಬೆಳೆಸುವ ಪ್ರಯತ್ನ ಮಾಡುತ್ತಿರುವುದು  ನಿಜಕ್ಕೂ ಶ್ಲಾಘನೀಯ ಎಂದು ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರೆ. ಫಾದರ್ ಡಾ. ಸಾಬು ಜಾರ್ಜ್ ಮಾತನಾಡಿ  ಕನ್ನಡ ವಿಭಾಗದ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರಿಗೂ ಅಭಿನಂದನೆ ಸಲ್ಲಿಸಿ ನೆರೆದಿರುವ ಎಲ್ಲರಿಗೂ 64ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಸಲ್ಲಿಸಿದರು. ‘”ಸಿರಿಗನ್ನಡಂ ಗೆಲ್ಗೆ -ಸಿರಿಗನ್ನಡಂ ಬಾಳ್ಗೆ ” ಎಂಬ ಮಾತಿನ ಮೂಲಕ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ರೆ.ಫಾದರ್. ಡಾ. ಸಾಬು ಚಾರ್ಜ್, ಉಪಪ್ರಾಂಶುಪಾಲ  ರೆ. ಫಾದರ್ ಅಬ್ರಾಹಂ, ಭಾಷೆಗಳ ವಿಭಾಗದ ಮುಖ್ಯಸ್ಥ ಮಾದೇಶ ಎನ್. ಜಯಲಕ್ಷ್ಮಿ, ಇನ್ನು ಮುಂತಾದವರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos