ಸವಾರರಿಗೆ ಟ್ರಾಫಿಕ್ ಖಡಕ್ ವಾರ್ನಿಂಗ್!

ಸವಾರರಿಗೆ ಟ್ರಾಫಿಕ್ ಖಡಕ್ ವಾರ್ನಿಂಗ್!

ಬೆಂಗಳೂರು, ಸೆ.28 : ಸಂಚಾರ ಅಪರಾಧಗಳಿಗೆ ದಂಡದ ಪ್ರಮಾಣ ಹೆಚ್ಚಾದ ನಂತರ ಸಾರ್ವಜನಿಕರು ಮತ್ತು ಸಂಚಾರಿ ಪೊಲೀಸರ ನಡುವೆ ಸಂಘರ್ಷಗಳು ಹೆಚ್ಚಾಗುತ್ತಿವೆ. ಇದಕ್ಕೆ ಅವಕಾಶ ನೀಡದಂತೆ ಎಲ್ಲರೂ ಸಹನೆಯಿಂದ ವರ್ತಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಬೆಂಗಳೂರು ನಗರ ಸಂಚಾರಿ ವಿಭಾಗದ ಡಿಸಿಪಿ ಜಿ.ಎ.ಜಗದೀಶ್ ಅವರು ಮೋಟಾರು ವಾಹನ ಕಾಯ್ದೆ ಅನ್ವಯ ಇತ್ತೀಚೆಗೆ ಕೇಂದ್ರ ಸರ್ಕಾರ ದಂಡದ ಮೊತ್ತವನ್ನು ಹೆಚ್ಚುವರಿ ಮಾಡಿದೆ. ಇದರಿಂದ ಸಾರ್ವಜನಿಕರು ಪೊಲೀಸರ ಜತೆ ಸಂಘರ್ಷಕ್ಕಿಳಿದಿದ್ದಾರೆ. ಹಲ್ಲೆ ಮಾಡುವಷ್ಟರ ಮಟ್ಟಿಗೆ ಪರಿಸ್ಥಿತಿ ಮುಂದುವರೆದಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಗುಂಪು ಸೇರಿ ಜಗಳ ಮಾಡುವುದು, ಹೊಡೆದಾಟ, ಹಲ್ಲೆ ಮಾಡುವುದು, ಕಾನೂನನ್ನು ಕೈಗೆತ್ತಿಕೊಳ್ಳುವುದು, ಶಾಂತಿ ಭಂಗ ಮಾಡುವುದು, ಕರ್ತವ್ಯಕ್ಕೆ ಅಡ್ಡಿಪಡಿಸುವುದು ಕಾನೂನು ಬಾಹೀರವಾಗಿದೆ. ಪೊಲೀಸರು ಕೂಡ ಸೌಜನ್ಯದಿಂದ ವರ್ತಿಸದೆ ಸಹನೆ, ತಾಳ್ಮೆ, ಸಮಾಧಾನದಿಂದ ಕೆಲಸ ಮಾಡಬೇಕು. ಎಂಥಹದ್ದೇ ಪ್ರಸಂಗ ಬಂದರೂ ಪ್ರಚೋದನೆಗೆ ಒಳಗಾಗಬಾರದು ಎಂದು ಸಲಹೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos