ಸೊಸೆಗೆ ಚಾಕು ಇರಿದು ಮಾವ ಪರಾರಿ

ಸೊಸೆಗೆ ಚಾಕು ಇರಿದು ಮಾವ ಪರಾರಿ

ಮಂಡ್ಯ, ನ. 10 : ಮನೆಯಲ್ಲಿ ಒಂಟಿಯಾಗಿದ್ದ ಸೊಸೆಗೆ ಮಾವ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ರಾಗಿಮುದ್ದೇನಹಳ್ಳಿಯಲ್ಲಿ ನಡೆದಿದೆ.
ಮೃತ ಮಹಿಳೆ ವೀಣಾ (26) ಎಂದು ತಿಳಿದುಬಂದಿದೆ.
ನಾಲ್ಕು ವರ್ಷಗಳ ಹಿಂದೆ ಅನಿಲ್ ಎಂಬುವವರೊಂದಿಗೆ ಪ್ರೇಮ ವಿವಾಹವಾಗಿದ್ದ ವೀಣಾ ಎಲ್ಲರೊಂದಿಗೂ ಹೊಂದಿಕೊಂಡು ಹೋಗುತ್ತಿದ್ದರು. ಇತ್ತೀಚೆಗೆ ದಂಪತಿಗಳ ವರ್ತನೆ ವಿರುದ್ಧ ಜಗಳವಾಡಿದ್ದರು. ಇದಕ್ಕೆ ಹಲವರು ಸಮಾಧಾನ ಹೇಳಿ ಒಟ್ಟಿಗೆ ಜೀವನ ನಡೆಸುವಂತೆ ತಿಳಿಸಿದ್ದರು.ಒಂದೇ ಮನೆಯಲ್ಲಿ ಎಲ್ಲರೂ ವಾಸವಾಗಿದ್ದರು. ಮಾವ ಮತ್ತು ಸೊಸೆ ನಡುವೆ ವೈಷಮ್ಯ ಬೆಳೆದಿತ್ತು.
ಪತಿ ಅನಿಲ್ ಮತ್ತು ಮಕ್ಕಳು ಪೆಟ್ಟಿಗೆ ಅಂಗಡಿಯಲ್ಲಿದ್ದಾಗ ಸಮಯ ಸಾಧಿಸಿ ಮನೆಗೆ ಬಂದ ನಾಗರಾಜ್ ಏಕಾಏಕಿ ಸೊಸೆ ವೀಣಾ ಮೇಲೆ ಹಲ್ಲೆ ನಡೆಸಿ ನಂತರ ಆಕೆಯ ಕತ್ತು ಹಾಗೂ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ

ಫ್ರೆಶ್ ನ್ಯೂಸ್

Latest Posts

Featured Videos