ಸಿದ್ದರಾಮಯ್ಯ ಸಿಎಂ ಪಟ್ಟ ಏರಿದ ಮೇಲೆ ರಾಜ್ಯದಲ್ಲಿ ಬರಗಾಲ ಎದುರಾಗಿದೆ: ಎಂ ಸತೀಶ್‌ ರೆಡ್ಡಿ

ಸಿದ್ದರಾಮಯ್ಯ ಸಿಎಂ ಪಟ್ಟ ಏರಿದ ಮೇಲೆ ರಾಜ್ಯದಲ್ಲಿ ಬರಗಾಲ ಎದುರಾಗಿದೆ: ಎಂ ಸತೀಶ್‌ ರೆಡ್ಡಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ಮೇಲೆ ಮಳೆಯೇ ಇಲ್ಲದಂತಾಗಿದೆ. ಕಳೆದ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಪಟ್ಟ ಏರಿದ ಮೇಲೆ ರಾಜ್ಯದಲ್ಲಿ ಬರಗಾಲ ಎದುರಾಗಿದೆ ಎಂದು ಹೇಳಿದರು.

ನಿನ್ನೆ ಬೊಮ್ಮನಹಳ್ಳಿ, ಫಿರಂಗಿಪಾಳ್ಯದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ ಅಂಗವಾಗಿ, ಅಂಬೇಡ್ಕರ್ ಭವನ ಉದ್ಘಾಟನೆ ಮಾಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,  ಸಿದ್ದರಾಮಯ್ಯ ಸಿಎಂ ಆದ ಮೇಲೆ ರಾಜ್ಯದಲ್ಲಿ ಮಳೆಯೇ ಇಲ್ಲ ಯಡಿಯೂರಪ್ಪ ಸಿಎಂ ಆಗಿದ್ದಾಗ ಮಳೆಯೆಂದರೆ ಮಳೆ ಎಲ್ಲೆಡೆ ಕೆರೆ ಕುಂಟೆಗಳು ತುಂಬಿ ಹೋಗಿತ್ತು ಈಗ ಬೋರ್ವೇಲ್ ಗಳು ಬತ್ತಿಹೋಗಿವೆ ಇದರಿಂದ ರಾಜ್ಯದ ಜನತೆ ಕಂಗಾಲಾಗಿದ್ದಾರೆ.

ತಮಿಳುನಾಡಿಗೆ ಈ ಬಾರಿ ಹೆಚ್ಚುವರಿ ನೀರನ್ನು ಬಿಟ್ಟಿದ್ದೇವೆ ಅಂತ. ಸುಮಾರು 407 ಟಿಎಂಸಿ ನೀರನ್ನು ಈಗಾಗಲೇ ಪುಣ್ಯಾತ್ಮ ತಮಿಳುನಾಡಿಗೆ ನೀರು ಬಿಟ್ಬಿಟ್ಟ ನೆನ್ನೇ ಸಚಿವ ಕೃಷ್ಣಭೈರೇಗೌಡ ಹೇಳ್ತಾರೆ.

ಕಾಂಗ್ರೆಸ್‌ನವರಿಗೆ ಮಾನ ಮರ್ಯಾದೆ ಅನ್ನೋದು ಇದ್ಯಾ, ನಿಮಗೆ ಹೆಚ್ಚುವರಿ ನೀರು ಬಿಡೋಕೆ ಯಾರು ಹೇಳಿದ್ದು, ಜ್ಞಾನ ಇಲ್ವಾ ನಿಮಗೆ. ಇನ್ನೊಂದು ತಿಂಗಳು ಮಳೆ ಬಾರದೆ ಇದ್ರೆ ಡ್ಯಾಂಗಳಿಂದ ಮಣ್ಣಿನ ಬುರದೆ ನೀರು ಬರುತ್ತೆ ಅಂತಹ ಪರಿಸ್ಥಿತಿಯನ್ನ ಈ ಸರ್ಕಾರ ಮಾಡಿಟ್ಟಿದೆ ಮಾನ ಮರ್ಯದೆ ಇದ್ರೆ ಬೆಂಗಳೂರಿನ ಜನರಿಗಾಗಿರುವ ನೀರಿನ ಸಮಸ್ಯೆ ಬಗೆಹರಿಸಿ ನೀರು ಕೊಟ್ಟು ಆಮೇಲೆ ವೋಟ್ ಕೇಳೋಕೆ ಕಾಂಗ್ರೇಸ್ ನವರು ಬನ್ನಿ ಸರ್ಕಾರ ನಡೆಸುತ್ತಿರುವ ಕಾಂಗ್ರೇಸ್ ನವರು ನೀರಿನ ಸಮಸ್ಯೆ ಬಗ್ಗೆ ಅರಿತುಕೊಳ್ಳಬೇಕು ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos