ಸರ್ಫರಾಜ್ ನಾಯಕತ್ವ ಬೇಡ : ಅಫ್ರಿದಿ

ಸರ್ಫರಾಜ್ ನಾಯಕತ್ವ ಬೇಡ : ಅಫ್ರಿದಿ

ಕರಾಚಿ, ಸೆ. 21 : ಸರ್ಫರಾಜ್ ಅಹಮ್ಮದ್ ಟೆಸ್ಟ್ ನಾಯಕರಾಗುವುದು ಬೇಡ ಎಂದು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಆಪ್ರೀದಿ ಅಭಿಪ್ರಾಯ ಪಟ್ಟರು.
ಸರ್ಫರಾಜ್ ಟೆಸ್ಟ್ ನಾಯಕರಾಗದೇ ಇದ್ದರೇ ಒಳಿತು. ಮೂರು ಮಾದರಿಯಲ್ಲಿ ನಾಯಕತ್ವದ ಜವಾಬ್ದಾರಿ ನಿರ್ವಹಿಸುವುದು ಸರ್ಫರಾಜ್ ಗೆ ಹೊರೆಯಾಗಲಿದೆ. ಸೀಮಿತ ಓವರ್ ಗಳ ಕ್ರಿಕೆಟ್’ನಲ್ಲಿ ಸರ್ಫರಾಜ್ ಯಶಸ್ವಿ ನಾಯಕರಾಗಬಹುದು ಎಂದು ಅಫ್ರಿದಿ ಹೇಳಿದ್ದಾರೆ.
ಇನ್ನು ಮತ್ತೋರ್ವ ಪಾಕ್ ಮಾಜಿ ನಾಯಕ ಜಹೀರ್ ಅಬ್ಬಾಸ್, ದೀರ್ಘಾವಧಿ ಮಾದರಿಯಲ್ಲಿ ನಾಯಕನಾಗಿ ಒತ್ತಡ ನಿರ್ವಹಿಸುವುದು ಕಷ್ಟ. ಸರ್ಫರಾಜ್ ಏಕದಿನ, ಟಿ20 ಮೇಲಷ್ಟೇ ಗಮನ ಹರಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos